ಮೈಸೂರಿನಲ್ಲಿ ಎಸ್ ಎಎಸ್ ಎಲ್ ಸಿ ಮೌಲ್ಯಮಾಪನ ಆರಂಭ…

Promotion

ಮೈಸೂರು,ಜು,13,2020(www.justkannada.in): ಇಂದಿನಿಂದ ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಆರಂಭವಾಗಿದ್ದು, ಮೈಸೂರಿನ ಆರು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದೆ.

ಸಕಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬೆಳಗ್ಗೆ 9.30 ರಿಂದ ಮೌಲ್ಯ ಮಾಪನ ಆರಂಭವಾಗಿದ್ದು, ಮೌಲ್ಯಮಾಪನ‌ಕೇಂದ್ರದಿಂದ 200 ಮೀಟಿರ್ ಸುತ್ತಮುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಮೌಲ್ಯ ಮಾಪನ‌ಕೇಂದ್ರದಲ್ಲಿ ಪೋಲಿಸ್ ಭ್ರದತೆ ವಹಿಸಲಾಗಿದ್ದು  ಪ್ರತಿ ಕೇಂದ್ರದಲ್ಲಿ ಸುಮಾರು 300 ರಿಂದ 350 ಮಂದಿ ಮೌಲ್ಯಮಾಪಕರಂತೆ ಒಟ್ಟು 2500 ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯ ನಿರ್ವಹಿಸುತ್ತಿದ್ದಾರೆ.sslc-mysore-evaluation

ಪ್ರತಿ ಕೊಠಡಿಯಲ್ಲಿ ಕೇವಲ 14 ಮಂದಿ ಮೌಲ್ಯಮಾಪಕರ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು  ಕೇವಲ 6 ದಿನದಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣವಾಗಲಿದೆ.

Key words: SSLC- Mysore- Evaluation