ರಾಜ್ಯಾದ್ಯಂತ ಇಂದು ಎಸ್ಎಸ್ಎಲ್ ಸಿ ಪರೀಕ್ಷೆ: ಪರೀಕ್ಷಾ ಕೇಂದ್ರದ ಬಳಿ ನಿಷೇಧಾಜ್ಞೆ ಜಾರಿ.

kannada t-shirts

ಮೈಸೂರು,ಜುಲೈ,19,2021(www.justkannada.in):  ಇಂದು ರಾಜ್ಯಾದ್ಯಂತ ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷಾ ಕೇಂದ್ರದ ಬಳಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.jk

ಬೆಳಿಗ್ಗೆ10:30ರಿಂದ ಮಧ್ಯಾಹ್ನ1:30ರ ವರೆಗೆ ಪರೀಕ್ಷೆ ನಡೆಯಲಿದ್ದು, ಇಂದು ಒಂದೇ ದಿನ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮೂರು ವಿಷಯಗಳ ಪರೀಕ್ಷೆ ನಡೆಸಲಾಗುತ್ತಿದೆ, ಜುಲೈ.22ರಂದು ಕನ್ನಡ, ಇಂಗ್ಲಿಷ್, ಹಿಂದಿ ಪರೀಕ್ಷೆ ನಡೆಯಲಿದೆ. ಕೊರೋನಾ ಮುಂಜಾಗ್ರತಾ ಕ್ರಮ ವಹಿಸಿ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರತೀ ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಗೆ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಒಂದು ಪರೀಕ್ಷಾ ಕೇಂದ್ರದಲ್ಲಿ 100ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಪರೀಕ್ಷೆ ಹಾಜರಾಗುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪರೀಕ್ಷೆಗೂ ಮುನ್ನ ಹಾಗೂ ಪರೀಕ್ಷೆಯ ಬಳಿಕವೂ ಕೊಠಡಿ ಸ್ಯಾನಿಟೈಸಿಂಗ್ ಮಾಡಲಾಗುತ್ತದೆ. ಇನ್ನು ಕೆಮ್ಮು, ನೆಗಡಿ, ಜ್ವರ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರದ 200 ಮೀ ಸುತ್ತ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳು, ಸೈಬರ್ ಕೆಫೆ, ಕಂಪ್ಯೂಟರ್ ಕೇಂದ್ರಗಳಿಗೆ ನಿಷೇಧ ಹೇರಲಾಗಿದೆ. ಪರೀಕ್ಷಾ ಕೇಂದ್ರದ ಬಳಿ ಗುಂಪುಗೂಡುವುದು, ನಿಲ್ಲುವುದು ಮತ್ತು ವಾಹನ ಪಾರ್ಕಿಂಗ್ ಗೂ ನಿಷೇಧ ಹೇರಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 38,989 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

ಮೈಸೂರು ಜಿಲ್ಲೆಯಲ್ಲಿ ಒಟ್ಟು 38,989 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 237 ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಲಾಗಿದೆ. ನಗರ-72, ಗ್ರಾಮಾಂತರ- 165 ಪರೀಕ್ಷೆ ಕೇಂದ್ರಗಳು. ರೆಗ್ಯುಲರ್ 37.474, ಖಾಸಗಿ -1081, ವಿಶೇಷ ಮಕ್ಕಳು-434 ವಿಧ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಪರೀಕ್ಷಾ ಪ್ರಕ್ರಿಯೆಗೆ ಒಟ್ಟು  3500 ಮಂದಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ENGLISH SUMMARY…

SSLC exams held today across the State: Prohibitory orders issued in school surroundings
Mysuru, July 19, 2021 (www.justkannada.in): SSLC exams are being held across the state today. Prohibitory orders have been issued in the surroundings of the schools where exams are being conducted.
The exams will be held from 10:30 am to 1:30 pm. Exams for three subjects including Mathematics, Science, Social Science are held on the first day. Exams for the remaining subjects like Kannada, English, and Hindi will be held on July 22. The exams are held following COVID guidelines strictly. Only one student is made to sit at one desk and only 12 students are accommodated in one classroom.
100 students are writing exams in one examination center. Thermal screening was conducted on all the students before entering the examination center. Measures have been taken to sanitize the entire center before and after the completion of the exams. Students who have symptoms like cough, cold, and fever are made to sit in separate classrooms and suitable police security has been provided near the examination centers.
Prohibitory orders have been imposed in 200 mts surround of the centers and all the xerox shops, cyber cafes, computer centers have been asked to close nearby the examination centers. People standing in groups, stand nearby and parking of vehicles has also been prohibited.
A total number of 38,989 students are appearing for the SSLC exams in Mysuru District. A total number of 237 examination centers are identified.
Keywords: SSLC exams/ prohibitory orders/ Karnataka/ 38,989 students/ appearing for exams in Mysuru

Key words: SSLC exams- today-Prohibition- near -Exam center.

website developers in mysore