ಆರೋಗ್ಯ ಇಲಾಖೆ ಸಲಹೆ, ಸಿಎಂ ಮೌಖಿಕ ಒಪ್ಪಿಗೆ ಪಡೆದು ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಘೋಷಣೆ- ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ.

ಬೆಂಗಳೂರು,ಜೂನ್,29,2021(www.justkannada.in): ಆರೋಗ್ಯ ಇಲಾಖೆ ಸಲಹೆ, ಸಿಎಂ ಮೌಖಿಕ ಒಪ್ಪಿಗೆ ಪಡೆದು ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.jk

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ಸುರೇಶ್ ಕುಮಾರ್, ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ನಿಗದಿ ಸಂಬಂಧ ಆರೋಗ್ಯ ಇಲಾಖೆ ಸಲಹೆ ಪಡೆಯಲಾಗಿದೆ. ಹಾಗೆಯೇ ಸಿಎಂ ಮೌಖಿಕ ಒಪ್ಪಿಗೆ ಪಡೆದೇ ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿ ಸ್ಪಷ್ಟನೆ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಪೂರ್ವಭಾವಿಯಾಗಿ ನನ್ನೊಂದಿಗೆ ಚರ್ಚಿಸಿ, SSLC ಪರೀಕ್ಷೆಗೆ ದಿನಾಂಕ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿದ ನಂತರವೇ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇದು ಏಕಪಕ್ಷೀಯ ತೀರ್ಮಾನವಲ್ಲ. ಈ ಬಗ್ಗೆ ಗೊಂದಲ ಸೃಷ್ಟಿಸುವುದು ಅನಗತ್ಯ ಎಂದು ತಿಳಿಸಿದ್ದಾರೆ.

ನಿನ್ನೆ ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳ ಜತೆ ಸಭೆ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಂತರ ಸುದ್ಧಿಗೋಷ್ಠಿ ನಡೆಸಿ ಎಸ್ ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಘೋಷಣೆ ಮಾಡಿದ್ದರು.  ಜುಲೈ 19 ಮತ್ತು 22 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ.

ENGLISH SUMMARY….

We have announced SSLC exams date after getting Health Dept. suggestion and CM’s oral approval: Minister Suresh Kumar
Bengaluru, June, 29 (www.justkannada.in): Minister for Primary and Secondary Education, Govt. of Karnataka has clarified that the dates of SSLC exams for the year academic year 2020-2021 has been finalized and announced after getting the suggestion of the Health Department and oral approval by the Chief Minister.
Following media reports, Minister Suresh Kumar has issued a press release clarifying that the SSCL exam date has been announced after getting the suggestion from the Health Department.
The Chief Minister B.S. Yedyurappa in a tweet has also mentioned that Education Minister Suresh Kumar has discussed the dates of examination before the announcement. “We have arrived at a decision to conduct the exam and finalized the dates to conduct the exams only after discussing in detail, it is not a one-sided decision. There is no need to create confusion,” the tweet read.
Keywords: Education Minister Suresh Kumar/ SSLC/ Exams/ dates/ Health Dept. / CM/ suggestion/ approval

Key words: SSLC –Examination- Minister -Suresh Kumar – decision-CM-bs yeddyurappa