ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ: ಮೈಸೂರಿನಲ್ಲಿ ಸಿದ್ದತೆ‌ ಹೇಗಿದೆ ಗೊತ್ತೆ..?

Promotion

ಮೈಸೂರು,ಜೂ,24,2020(www.justkannada.in):  ಮಹಮಾರಿ ಕೊರೋನಾ ಅಬ್ಬರದ ನಡುವೆ ನಾಳೆ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದ್ದು, ಮಕ್ಕಳ ಆರೋಗ್ಯದ ದೃಷ್ಠಿಯಿಂದ ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನ ಕೈಗೊಂಡಿದೆ.

ಈ ನಡುವೆ ನಾಳಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮೈಸೂರಿನಲ್ಲೂ ಸಿದ್ಧತೆ ನಡೆಸಲಾಗಿದ್ದು ಈ ಬಗ್ಗೆ ಮೈಸೂರು ಜಿಲ್ಲಾ ಡಿಡಿಪಿಐ ಪಾಡುರಂಗ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಒಟ್ಟು 139 ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಿದ್ದು, ಜಿಲ್ಲೆಯಲ್ಲಿ ಒಟ್ಟು 39,822 SSLC ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಂಟೈನ್ಮೆಟ್ ಕೇಂದ್ರದಿಂದ SSLC ಪರೀಕ್ಷೆ ಬರೆಯಲು ಬರುವ ಮಕ್ಕಳ ಸಂಖ್ಯೆ  22 ಇದೆ. ಕಂಟೈನ್ಮೆಂಟ್ ಜೋನ್‌ನಿಂದ ಬರುವ ಮಕ್ಕಳಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಪರೀಕ್ಷೆ ಬರೆಯುವ ಮಕ್ಕಳಿಗೆ ಮಾಸ್ಕ್‌, ಸ್ಯಾನಿಟೈಸರ್, ಥರ್ಮಲ್‌ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಮೈಸೂರಿನಲ್ಲಿ 1468 ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು 54 ಬಸ್ಸುಗಳನ್ನ ಸಾರಿಗೆ ವ್ಯವಸ್ಥೆ ಇಲ್ಲದ ಸ್ಥಳಗಳಿಗೆ ರವಾನೆ ಮಾಡಲಾಗುತ್ತದೆ. ಹೊರ ರಾಜ್ಯದಿಂದ ಮೈಸೂರಿಗೆ ಬಂದು ಪರೀಕ್ಷೆ ಬರೆಯುವ SSLC ವಿದ್ಯಾರ್ಥಿಗಳು ಯಾರು ಇಲ್ಲ. ಹೊರ ಜಿಲ್ಲೆಯಿಂದ ಮೈಸೂರಿಗೆ ಪರೀಕ್ಷೆ ಬರೆಯಲು ಬರುತ್ತಿರುವ ಮಕ್ಕಳ ಸಂಖ್ಯೆ 338 ಇದೆ. ಹಾಗೆಯೇ 851  ಮಂದಿ ವಿದ್ಯಾರ್ಥಿಗಳು ಮೈಸೂರು ಜಿಲ್ಲೆಯಿಂದ ಪರೀಕ್ಷೆ ಬರೆಯಲು ಹೊರ ಜಿಲ್ಲೆಗೆ ಹೋಗಲಿದ್ದಾರೆ ಎಂದು ಡಿಡಿಪಿಐ ಪಾಡುರಂಗ ತಿಳಿಸಿದ್ದಾರೆ.SSLC exam- tomorrow- Mysore -preparation

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಂದು ದ್ವಿಚಕ್ರ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ ಯಾವುದೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕ್ವಾರಂಟೈನ್ ಆಗಿಲ್ಲ. ಪ್ರತಿ ಕೊಠಡಿಯಲ್ಲಿ 18 ರಿಂದ 20 ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಪಾಡುರಂಗ ಅವರು ಮಾಹಿತಿ ನೀಡಿದರು.

Key words: SSLC exam- tomorrow- Mysore -preparation