ಎಸ್ ಎಸ್ ಎಲ್ ಸಿ ಪರೀಕ್ಷೆ: ಸರ್ಕಾರದ ನಿಯಮ ಪಾಲಿಸದಿದ್ದರೇ ಕ್ರಮ- ಶಿಕ್ಷಣ ಸಚಿವ ಬಿಸಿ ನಾಗೇಶ್.

Promotion

ಬೆಂಗಳೂರು,ಮಾರ್ಚ್,27,2022(www.justkannada.in):  ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭ ಹಿನ್ನೆಲೆಯಲ್ಲಿ  ಸಮವಸ್ತ್ರ ಧರಿಸದೇ ಬಂದರೆ ಅವಕಾಶವಿಲ್ಲ. ಸರ್ಕಾರದ ನಿಯಮ ಪಾಲಿಸದಿದ್ದರೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಬಿಸಿ ನಾಗೇಶ್, ಪರೀಕ್ಷೆಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಬರಬೇಕು. ಸಮವಸ್ತ್ರ ಕಡ್ಡಾಯ ಇಲ್ಲದ ಶಾಲೆಗಳಲ್ಲಿ ಡಿಡಿಪಿಐ ನಿರ್ಧಾರ ಕೈಗೊಳ್ಳುತ್ತಾರೆ.  ಪರೀಕ್ಷೆಗೆ ಗೈರಾದವರಿಗೆ ಮರು ಪರೀಕ್ಷೆ ಇಲ್ಲ.  ಶಾಲಾ ಆವರಣದವರೆಗೂ ಹಿಜಾಬ್ ಧರಿಸಲು ಅವಕಾಶವಿದೆ. ಆದರೆ ತರಗತಿಯಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದರು.

ವಿದ್ಯಾರ್ಥಿಗಳು ಸರ್ಕಾರದ ನಿರ್ಧಾರ ಪಾಲಿಸಬೇಕು.  ಆದೇಶ ಪಾಲಿಸದಿದ್ದರೇ ಕ್ರಮ ಕೈಗೊಳ್ಳಲಾಗುತ್ತದೆ  ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.  ವಿವಾದಕ್ಕೆ ಆಸ್ಪದ ಕೊಡಲ್ಲ ಅಂದು ಕೊಂಡಿದ್ದೇವೆ ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

Key words: SSLC-exam-hijab-minister-BC Nagesh