ಶ್ರೀರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ. ಶ್ರೀರಾಮ ನಮ್ಮವನು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 

Promotion

ಬೆಂಗಳೂರು,ಮಾರ್ಚ್,13,2021(www.justkannada.in) : ಶ್ರೀರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ. ಶ್ರೀರಾಮ ನಮ್ಮವನು, ನಾವೆಲ್ಲಾ ಅವರ ಮಕ್ಕಳು. ಬಿಜೆಪಿ ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ವಿನಾ ಕಾರಣ ಕೇಸ್ ಹಾಕುವ ಮೂಲಕ, ಕಿರುಕುಳ ನೀಡುತ್ತಿದ್ದು, ಇದರ ವಿರುದ್ಧ ನಮ್ಮ ಹೋರಾಟವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.jkಶಿವಮೊಗ್ಗದಲ್ಲಿ ಶಿವಮೊಗ್ಗ ಚಲೋ ನಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ನಮ್ಮ ಕಾರ್ಯಕರ್ತರಿಗೆ ಯಾರೇ ಕಿರುಕುಳ ನೀಡಿದ್ರು, ಅಲ್ಲಿಂದಲೇ ನಮ್ಮ ಹೋರಾಟ ನಡೆಸುತ್ತೇವೆ. ರಾಜ್ಯಾದ್ಯಂತ ಬಿಜೆಪಿ ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ. ಇಂತಹ ಹೋರಾಟವನ್ನು ಶಿವಮೊಗ್ಗದಿಂದ ಪ್ರಾರಂಭಿಸಿದ್ದೇವೆ. ಒಂದು ಸುಳ್ಳನ್ನು ನೂರು ಬಾರಿ ಹೇಳಬೇಕು ಎನ್ನುವಂತ ಈಶ್ವರಪ್ಪ ಅವರಿಂದ ನಾವೇನೂ ಕಲಿಯಬೇಕಿಲ್ಲ ಎಂಬುದಾಗಿ ತಿಳಿಸಿದರು.Congress -principle - welcome – Party-KPCC-president-DK Shivakumar.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಶ್ರೀರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ. ಶ್ರೀರಾಮ ನಮ್ಮವರು, ನಾವೆಲ್ಲಾ ಅವರ ಮಕ್ಕಳು. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್ ಐ ಟಿ ತನಿಖೆ ಸರಿಯಾಗಿ ನಡೆಯಬೇಕಿದೆ. ಮೊದಲು ಸಿಡಿ ನಕಲಿಯೋ ಅಸಲಿಯೋ ಎಂದು ತಿಳಿಯಬೇಕಿದೆ. ಇದು ಸರಿಯಾದ ತನಿಖೆಯಿಂದ ಹೊರಬರಬೇಕಿದೆ ಎಂದರು.

key words : Srirama-Not just-BJP’s-Not asset-Srirama-Ours-KPCC-President-D.K.Shivakumar