ಇಂದಿನಿಂದ ದಾದರ್- ಮೈಸೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್‌ ರೈಲು ಸಂಚಾರ….

Promotion

ಮೈಸೂರು,ಫೆಬ್ರವರಿ,11,2021(www.justkannada.in): ಕೊರೋನಾ ಭೀತಿ, ಲಾಕ್ ಡೌನ್ ಬಳಿಕ ರೈಲ್ವೆ ಸಂಚಾರ ಆರಂಭವಾಗಿದ್ದು,  ಈ ನಡುವೆ ಇಂದಿನಿಂದ ದಾದರ್ ಮತ್ತು ಮೈಸೂರು ನಡುವೆ ವಿಶೇಷ ಎಕ್ಸ್‌ ಪ್ರೆಸ್‌ ರೈಲು ಸಂಚಾರ ಪ್ರಾರಂಭವಾಗಲಿದೆ.

ರೈಲು ಸಂಖ್ಯೆ 01035 ರೈಲು ದಾದರ್ ನಿಂದ ಮೈಸೂರಿಗೆ,  ರೈಲು ಸಂಖ್ಯೆ 01036  ರೈಲು ಮೈಸೂರಿನಿಂದ ದಾದರ್ ಗೆ ಸಂಚಾರ ನಡೆಸಲಿದೆ. ವಾರದಲ್ಲಿ ಎರಡು ದಿನ ಈ ರೈಲುಗಳು ಸಂಚಾರ ನಡೆಸಲಿವೆ.  ಮೈಸೂರಿನಿಂದ ದಾದರ್ ಗೆ ಪ್ರತಿ ಭಾನುವಾರ  ಬೆಳಗ್ಗೆ 6.15 ಕ್ಕೆ ಹೊರಟು ಸೋಮವಾರ ಬೆಳಗ್ಗೆ 5.30 ಕ್ಕೆ ದಾದರ್ ಗೆ ರೈಲು ತಲುಪಲಿದೆ.

Special express –train- service -between -Dadar - Mysore
ಕೃಪೆ-internet

ಹಾಗೆಯೇ ದಾದರ್ ನಿಂದ ಮೈಸೂರಿಗೆ ಪ್ರತಿ ಗುರುವಾರ ರಾತ್ರಿ 9.30ಕ್ಕೆ ಹೊರಟು ಶುಕ್ರವಾರ ರಾತ್ರಿ 9.40ಕ್ಕೆ ಮೈಸೂರಿಗೆ ರೈಲು ಬಂದು ಸೇರಲಿದೆ. ಪುಣೆ, ಸತಾರ್, ಮೀರಾಜ್, ಕುಡಚಿ ಘಟಪ್ರಭಾ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಅರಸೀಕೆರೆ ಮಾರ್ಗವಾಗಿ ನೂತನ ರೈಲುಗಳು ಸಂಚಾರ ಮಾಡಲಿವೆ. ಇನ್ನು ಈ ರೈಲುಗಳು 1 ಎಸಿ 1 ಟೈರ್, 3 ಎಸಿ 3 ಟೈರ್, 8 ಸ್ಲೀಪರ್ ಕೋಚ್, 5 ಸೆಕೆಂಡ್ ಕ್ಲಾಸ್ ಬೋಗಿಗಳನ್ನ ಒಳಗೊಂಡಿವೆ.

Key words: Special express –train- service -between -Dadar – Mysore