ಉದ್ಯಮಿಗಳನ್ನು ಪ್ರೋತ್ಸಾಹಿಸಲು ಕನ್ನಡದಲ್ಲಿ ವಿಶೇಷ ಕೋರ್ಸ್: ಎಫ್ ಕೆಸಿಸಿಐ ಅಧ್ಯಕ್ಷರಿಂದ ಲೋಕಾರ್ಪಣೆ….

ಬೆಂಗಳೂರು,ಅಕ್ಟೋಬರ್,8,2020(www.justkannada.in):  ಬಿಸಿನೆಸ್ ಕಟ್ಟಬೇಕು ,ಉದ್ಯಮಿಗಳಾಗಬೇಕು ಎಂದು ಬಯಸುವವರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿ ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಕೋರ್ಸ್ ಗಳನ್ನು ಎಫ್ ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಲೋಕಾರ್ಪಣೆಗೊಳಿಸಿದರು.jk-logo-justkannada-logo

ಬೆಂಗಳೂರಿನ ಶಾಂತಿನಗರದ ಇಂಡಿಯನ್ ಮನಿ ಡಾಟ್ ಕಾಂ ಕೇಂದ್ರ ಕಚೇರಿಯಲ್ಲಿ  ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎಫ್ ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್, ಉದ್ಯಮಿಗಳಾಗಬೇಕು ಎನ್ನುವವರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿರುವ ‘ಬಿಸಿನೆಸ್ ಕಟ್ಟುವುದು ಹೇಗೆ?’ ಎನ್ನುವ ಕೋರ್ಸ್ ಉಪಯುಕ್ತವಾಗಿದೆ. ಅದರಲ್ಲೂ ಕನ್ನಡದಲ್ಲೇ ಈ ಕೋರ್ಸ್ ಆರಂಭಿಸಿರುವುದು ಮೆಚ್ಚುಗೆ ಪಡುವಂತಹ ವಿಚಾರ ಎಂದರು.

ಬೆಂಗಳೂರು ಸ್ಟಾರ್ಟ್ ಅಪ್ ಉದ್ದಿಮೆಗಳ ರಾಜಧಾನಿಯಾಗಿದೆ. ನವೋದ್ಯಮಗಳಿಗೆ ಬೇಕಿರುವ ಕೌಶಲಗಳಿಗೆ ತರಬೇತಿ ನೀಡುವ ಸಲುವಾಗಿ ಸರ್ಕಾರದ ಸಹಯೋಗದೊಂದಿಗೆ ಎಫ್ ಕೆಸಿಸಿಐ ಒಂದು ವಿಶೇಷ ತರಬೇತಿ ಕೇಂದ್ರ ಆರಂಭಿಸಲಿದೆ. ಈ ಹೊಸ ಕೇಂದ್ರದ ನಿರ್ಮಾಣದಿಂದ ಹೆಚ್ಚು ವೃತ್ತಿಪರರನ್ನು ಸೃಷ್ಟಿಸಿ ಉದ್ದಿಮೆಗಳನ್ನು ಬೆಳಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.special-course-kannada-encourage-entrepreneurs-focus-fkcci-president

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯನ್ ಮನಿ ಡಾಟ್ ಕಾಂ ನ ಸಿಇಒ ಸಿ ಎಸ್ ಸುಧೀರ್, ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿರುವ ಬಿಸಿನೆಸ್ ಕಟ್ಟುವುದು ಹೇಗೆ?  ಎನ್ನುವ ಕೋರ್ಸ್ ಸ್ವಂತ ಉದ್ದಿಮೆ ಆರಂಭಿಸಬೇಕು, ಕಟ್ಟಿರುವ ಉದ್ದಿಮೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು, ಬೆಳೆಸಿರುವ ಉದ್ಯಮವನ್ನು ವಿಸ್ತರಿಸಬೇಕು ಎಂದುಕೊಂಡಿರುವವರಿಗೆ ಅನುಕೂಲವಾಗಲಿದೆ. ಹೆಚ್ಚು ಜನರಿಗೆ ಈ ವಿಚಾರ ತಲುಪಬೇಕು ಎನ್ನುವ ಉದ್ದೇಶದಿಂದ ಕನ್ನಡದಲ್ಲೇ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಮತ್ತಷ್ಟು ಕೋರ್ಸ್ ಗಳನ್ನು ರೂಪಿಸಲಾಗುತ್ತದೆ ಎಂದು ವಿವರಿಸಿದರು.

Key words: Special course – Kannada – encourage-entrepreneurs-Focus – FKCCI- President.