ಖಡಕ್ ಫೋಟೋ ಶೇರ್ ಮಾಡಿ ಖಡಕ್ ಉತ್ತರ ಉತ್ತರ ನೀಡಿದ ಸೋನಂ ಕಪೂರ್!

Promotion

ಬೆಂಗಳೂರು, ಸೆಪ್ಟೆಂಬರ್ 02, 2021 (www.justkannada.in): ನಟಿ ಸೋನಮ್ ಕಪೂರ್ ಗರ್ಭಿಣಿ ಆಗಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದವರಿಗೆ ಖಡಕ್ ‍ಉತ್ತರ ಕೊಟ್ಟಿದ್ದಾರೆ ಸೋನಮ್!

ಹೌದು. ತಾವು ಗರ್ಭಿಣಿ ಆಗಿಲ್ಲ ಎಂದು ಹೊಟ್ಟೆ ತೋರಿಸಿ ಉತ್ತರ ಕೊಟ್ಟಿದ್ದಾರೆ ಸೋನಂ ಕಪೂರ್.

ಜಿಮ್‌ನಲ್ಲಿ ವರ್ಕೌಟ್ ಮಾಡಿ ಬಳಿಕ ಹೊಟ್ಟೆಯ ಭಾಗ ಕಾಣುವಂತೆ ಅಂಗಿ ಮೇಲಕ್ಕೆತ್ತಿ ಚಿತ್ರ ತೆಗೆದುಕೊಂಡಿರುವ ಸೋನಂ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ 2018ರ ಮೇ ತಿಂಗಳಲ್ಲಿ ಉದ್ಯಮಿ ಆನಂದ್ ಆಹುಜಾ ಜೊತೆ ಸೋನಂ ಕಪೂರ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಪತಿಯ ಜೊತೆ ಲಂಡನ್‌ನಲ್ಲಿ ನೆಲೆಸಿದ್ದ ಸೋನಂ 2020ರಿಂದಲೂ ಅಲ್ಲೆ ಉಳಿದುಕೊಂಡಿದ್ದರು.