ಮೊಬೈಲ್ ಕೊಡಿಸದಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಮಗ.

Promotion

ಬೆಂಗಳೂರು,ಜೂನ್,3,2022(www.justkannada.in): ಮೊಬೈಲ್ ಕೊಡಿಸದಿದ್ದಕ್ಕೆ ತನ್ನ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ  ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೇಗೂರಿನ ಮೈಲಸಂದ್ರದಲ್ಲಿ  ಈ ಘಟನೆ ನಡೆದಿದೆ. ತಾಯಿ ಫಾತಿಮಾ ಮೇರಿ ಪುತ್ರನಿಂದಲೇ ಕೊಲೆಯಾದವರು. ದೀಪಕ್ ಎಂಬುವವನೇ ಹತ್ಯೆಗೈದ ಮಗ.  ಕಳೆದ 1 ವಾರದಿಂದ ಮೊಬೈಲ್ ಕೊಡಿಸುವಂತೆ ತಾಯಿ ಫಾತಿಮಾ ಮೇರಿಗೆ ದೀಪಕ್  ಒತ್ತಾಯಿಸುತ್ತಿದ್ದ.

ಈ ನಡುವೆ ನಿನ್ನೆ ಕೂಡ ಮೊಬೈಲ್‌ ಕೊಡಿಸುವಂತೆ ತಾಯಿ ಜತೆ ಜಗಳವಾಡಿದ್ದ. ದುಡ್ಡಿಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ಫಾತಿಮಾ ಮೇರಿ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಪುತ್ರ ದೀಪಕ್ ​ನಿಂದ ಕತ್ತು ಹಿಸುಕಿ ತಾಯಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Key words: son- Mother-killed –mobile-bangalore