ಉಡುಪಿ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ನಾಯಕರು ಪಕ್ಷಕ್ಕೆ ಬಂದಿದ್ದಾರೆ: ಇನ್ನು ಮುಂದೆ ಬಿಜೆಪಿಯ ಪರ್ವ- ಸಚಿವ ಆರ್.ಅಶೋಕ್.

Promotion

 

ಬೆಂಗಳೂರು,ಮೇ,7,2022(www.justkannada.in): ಉಡುಪಿ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರು ಬಿಜೆಪಿಗೆ ಬಂದಿದ್ದಾರೆ. ಯಾವುದೇ ಷರತ್ತು ಇಲ್ಲದೆ ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಭಾಗದ ನಾಯಕರು ಬಿಜೆಪಿಗೆ ಸೇರ್ಪಡೆಯಾಗದ್ದಾರೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಇಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್  ಮಾಜಿ ಎಂಎಲ್ ಸಿ ಸಂದೇಶ್ ನಾಗರಾಜ್ ಸೇರಿ ಹಲವರು ನಾಯಕರು ಇಂದು ಸಿಎಂ ಬೊಮ್ಮಾಯಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಸೆರ್ಪಡೆಯಾದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ಕರ್ನಾಟಕದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸಿದೆ. ಬೇರೆ ಪಕ್ಷಗಳು ಗೊಂದಲದಲ್ಲಿ ಹೊರಳಾಡ್ತಿವೆ ಅಮಿತ್ ಶಾ, ಸಂತೋಷ್ ಅವರು ರಾಜ್ಯಕ್ಕೆ ಬಂದು ಚರ್ಚೆ ಮಾಡಿ ಹೋಗಿದ್ದಾರೆ. ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಭಾಗದ ನಾಯಕರನ್ನ ಬಿಜೆಪಿಗೆ ಬರಮಾಡಿಕೊಳ್ಳಲಾಗಿದೆ. ಬಿಜೆಪಿಯ ನಾಯಕರು ರಣತಂತ್ರ ಮಾಡಿದ್ದಾರೆ. ಇದು ಪ್ರಾಥಮಿಕ ಹಂತ. ಇನ್ನೂ ಹಲವರನ್ನ ಗುರ್ತಿಸಿದ್ದೇವೆ. ಇದು ನಿನ್ನೆ, ಇಂದಿನ ಮಾತಲ್ಲ. ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಉಸ್ತುವಾರಿ ಅರುಣ್ ಸಿಂಗ್ ಅನುಮತಿ ಪಡೆದು ಕಾರ್ಯಕ್ರಮ ಮಾಡಿದ್ದೇವೆ. ಉಡುಪಿ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆ ಮೊದಲನೇ ಹಂತವಾಗಿದೆ. ಎರಡನೇ ಹಂತದಲ್ಲಿ ಬೇರೆ ಭಾಗದಲ್ಲಿ ನಡೆಯಲಿದೆ. ಇನ್ನು ಮುಂದೆ ಬಿಜೆಪಿಯ ಪರ್ವ. ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಕೇಳ್ತಿದ್ದಾರೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಮತ್ತೆ ಕೆಲಸ ಮಾಡಲು ಪ್ಲಾನ್ ಮಾಡಿದ್ದೇವೆ. ನಮ್ಮ ಕೇಂದ್ರದ ನಾಯಕರು 150+ ಟಾಸ್ಕ್ ಕೊಟ್ಟಿದ್ದಾರೆ ಎಂದರು.

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಮಾಜಿ ಎಂಎಲ್ ಸಿ ಸಂದೇಶ್ ನಾಗರಾಜ್, ನಾನು ಎರಡುವರೆ ವರ್ಷದಿಂದ ಅಕ್ರಮವಾಗಿ ಬಿಜೆಪಿಯಲ್ಲಿದ್ದೆ. ಈಗ ಸಕ್ರಮವಾಗಿ ಬಿಜೆಪಿ ಸೇರಿದ್ದೇನೆ. ಬಿಜೆಪಿ ನನಗೂ ಒಳ್ಳೇದು ಮಾಡುತ್ತೆ,ನಾನು ಬಿಜೆಪಿಗೂ ಒಳ್ಳೇದು ಮಾಡುತ್ತೇನೆ ಎಂದರು.

ಪ್ರಮೋದ್ ಮಧ್ವರಾಜ್  ಮಾತನಾಡಿ, ನನ್ನ ಬದುಕಿನಲ್ಲಿ ಹೊಸ ಪರ್ವ ಶುರು. ದೇಶದಲ್ಲಿ ಇವತ್ತು ಒನ್ ನೇಷನ್, ಒನ್‌ಲೀಡರ್, ಒನ್ ಪಾರ್ಟಿ ಆಗಿದೆ. ಮೋದಿಯವರ ಮೇಲೆ , ಸಿಎಂ ಮೇಲೆ ಕಟೀಲ್ ಮೇಲೆ ವಿಶ್ವಾಸ ಇಟ್ಟು ಸೇರಿದ್ದೇನೆ. ಯಾವುದೇ ಷರತ್ತಿಲ್ಲದೇ ಸೇರ್ಪಡೆ ಆಗಿದ್ದೇನೆ. ಮೋದಿ ಆಡಳಿತ ಮೆಚ್ಚಿ ಸೇರ್ಪಡೆಯಾಗಿದ್ದೇನೆ ಎಂದರು.

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಮಂಜುನಾಥ್ ಗೌಡ, ಮೋದಿಯವರ ಕನಸು ಭಾರತ ಕಟ್ಟಲು‌ ನಾನು ಬಿಜೆಪಿ ಸೇರಿದ್ದೇನೆ. ಸರಳ ಸಿಎಂ ಬೊಮ್ಮಾಯಿ‌ ಬೆಂಬಲಿಸಲು ನಾವು ಈಗಷ್ಟೇ ಬಿಜೆಪಿ ಸೇರಿದ್ದೇವೆ. ಇಲ್ಲಿನ ಕಾರ್ಯವೈಖರಿ ನಮಗೆ ಗೊತ್ತಿಲ್ಲ ನಮ್ಮನ್ನ ಅನುಮಾನಿಸುತ್ತಾರೆ, ಎಲ್ಲಿ ಪಕ್ಷ ಬಿಡ್ತಾರೋ ಅಂತ. ನಮ್ಮ ಜೀವ ಇರೋವರೆಗೂ ನಾವು ಬಿಜೆಪಿಯಲ್ಲಿ ಇರ್ತೇವೆ. ಇಲ್ಲೆ ರಾಜಕಾರಣ ಮಾಡ್ತೀವಿ. ಕೋಲಾರದಲ್ಲಿ ಒಂದು ಎಂ ಎಲ್ ಎ ಇಲ್ಲದಾಗಿದೆ. 4 ಜನ ಎಂ ಎಲ್ ಎ ಗೆದ್ದುಕೊಂಡು ಬರ್ತೀವಿ. ನಿಮ್ಮ ನಂಬಿಕೆ ಉಳಿಸ್ಕೋತಿವಿ ಎಂದರು.

ವರ್ತೂರು ಪ್ರಕಾಶ್  ಮಾತನಾಡಿ, ಸಿಎಂ ಉತ್ತರ ಕರ್ನಾಟಕ ಭಾಗದವರು. 150 ಸ್ಥಾನಗಳು 175 ಕೂಡ ಆಗಬಹುದು. ಕಳೆದ 15 ವರ್ಷಗಳಲ್ಲಿ ರಾಜ್ಯದ ಲ್ಲಿ ಅನೇಕ ಆಸೆಗಳನ್ನು ಹಿಂದುಳಿದ ಸಮಾಜ ಇಟ್ಕೊಂಡಿತ್ತು. ಈಗ ಅದು ಹುಸಿಯಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಸಿಎಂ ನಾಯಕತ್ವದಲ್ಲಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಆಗುತ್ತೆ. ನಾಯಕರಿಗೆ ಶಕ್ತಿ ನೀಡುವಂತಹ ಕೆಲಸ ಮಾಡುತ್ತೇನೆ. ಈ ಹಿಂದೆ ನಾನು ಎಂ ಎಲ್ ಎ ಆಗಿದ್ದಾಗ ನಾನು ಕ್ಷೇತ್ರಕ್ಕೆ ಹೋಗಿಲ್ಲ. ಬಿಜೆಪಿ ಅನುದಾನ ನೀಡಿದ್ದರಿಂದ  ನಾನು independent ಆಗಿ ಗೆದ್ದಿದ್ದೆ. ಕೋಲಾರದಲ್ಲಿ ನನ್ನನ್ನು ಸೋಲಿಸೋಕೆ ಯಾರಿಂದಲೂ ಆಗಲ್ಲ ಎಂದರು.

ಕಾರ್ಯಕ್ರಮದಲ್ಲಿ  ಮಾತನಾಡಿದ ಸಿಎಂ ಬೊಮ್ಮಾಯಿ‌, ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಗಾಳಿ ಬೀಸುತ್ತಿದೆ. ದಕ್ಷಿಣ ಕರ್ನಾಟಕ ಅಂದ್ರೆ‌ ನಮ್ಮ ಕೈಯಲ್ಲಿರುವ ಕ್ಷೇತ್ರ,ಕಪಿಮುಷ್ಟಿಯಲ್ಲಿರುವ ಕ್ಷೇತ್ರ ಅಂತ ಕೆಲವರು ಹೇಳಿಕೊಂಡು ಓಡಾಡ್ತ ಇದ್ರು. ದಕ್ಷಿಣ ಕರ್ನಾಟಕದ ಜನ ಪ್ರಬುದ್ಧ ಜನ. ರಾಜರ ಕಾಲದಿಂದಲೂ ಈ ಪ್ರದೇಶ ಪ್ರಗತಿಯಲ್ಲಿತ್ತು. ಹಲವಾರು ವರ್ಷ 2 ಪಕ್ಷ ಬೆಂಬಲಿಸಿ‌ ಇಂದು ಭ್ರಮನಿರಸನಗೊಂಡಿದ್ದಾರೆ. ಬದಲಾವಣೆಯನ್ನು ಆ ಭಾಗದ ಜನರು ಬಯಸುತ್ತಿದ್ದಾರೆ. ಪಕ್ಷ ಸೇರ್ಪಡೆಯಾದವರು ಜನ ಮಿಡಿತ ಗೊತ್ತಿರುವವರು. ಈ ಭಾಗದ ಸಮಸ್ಯೆ ಬಗೆಹರಿಸೋಕೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಜನರಿಗೆ ಈ ಬಗ್ಗೆ ವಿಶ್ವಾಸ ಬಂದಿದೆ. ಯಾವುದನ್ನು ಜನ ಒಳ್ಳೆದಕ್ಕೆ ಹೇಳ್ತಿವೊ ಆ ಕೆಲಸ ಮಾಡುವೊ ಜವಾಬ್ದಾರಿ ಮೋದಿಯವರಿಗಿದೆ. ಭಾರತವನ್ನು ವಿಶ್ವಗುರು ಮಾಡುವ ಶಕ್ತಿ ಮೋದಿಯವರಿಗಿದೆ. ಎಲ್ಲರನ್ನೂ ಸಮಾನವಾಗಿ ನೋಡುವ ರಾಜಕಾರಣ ಇದೆ. ಸಬ್ ಕಾ ಸಾಥ್,ಸಬ್ ಕಾ ವಿಕಾಸ್,ಸಬ್ ಕಾ ವಿಶ್ವಾಸ್,ಸಬ್ ಕಾ ಪ್ರಯಾಸ್ 4 ಮಂತ್ರ ಇಟ್ಕೊಂಡು ಹೋಗ್ತಿದ್ದಾರೆ. ಕೆಲವರು ಟೀಕೆ ಮಾಡ್ತಾರೆ,ಟೀಕೆ ಮಾಡೋದು ಸುಲಭ. 24 ಗಂಟೆ ಕೆಲಸ ಮಾಡ್ತಿರುವುದು ಮೋದಿಯವರು ಎಂದರು.

Key words:  some leaders join- BJP- Minister -R. Ashok.