ಕಾಂಗ್ರೆಸ್ ಅವಧಿಯ ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರ- ಮಾಜಿ ಸಿಎಂ ಹೆಚ್.ಡಿಕೆ ಆರೋಪ.

ತುಮಕೂರು,ಡಿಸೆಂಬರ್,5,2022(www.justkannada.in):  ಕಾಂಗ್ರೆಸ್ ಅವಧಿಯಲ್ಲಿ ಪಾವಗಡದಲ್ಲಿ ನಿರ್ಮಾಣವಾದ  ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ  ಆರೋಪ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಅವಧಿಯಲ್ಲಿ ಪಾವಗಡದ ಸೋಲಾರ್​ ಪಾರ್ಕ್​ ನಿರ್ಮಾಣ ಆಗಿದೆ. ಇದು ಭ್ರಷ್ಟಾಚಾರದ ಒಂದು ಭಾಗ.  ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು ರೈತರ ಭೂಮಿ ದಾಖಲೆಗಳನ್ನು ತಿದ್ದುಪಡಿ ಅಕ್ರಮ ಮಾಡಿದ್ದಾರೆ. ಬಿಜೆಪಿ ಸರ್ಕಾರ ತನಿಖೆ ಮಾಡುತ್ತೇವೆ ಎಂದು ಬರೀ ಸುಳ್ಳು ಹೇಳುತ್ತಿದೆ. ಈಗಿನ ಸರ್ಕಾರ ಅಲ್ಲಿನ ಅವ್ಯವಹಾರವನ್ನು ಜನರ ಮುಂದಿಡಬೇಕು.  ಸರ್ಕಾರ ಪ್ರಾಮಾಣಿಕವಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

2016 ರಲ್ಲಿ ಸದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಶಕ್ತಿ ಇಲಾಖೆಯಲ್ಲಿ ಆದಂತಹ ಭ್ರಷ್ಟಾಚಾರದ ವಿರುದ್ಧ ನಾನು ಸುಧೀರ್ಘವಾಗಿ ಮಾತನಾಡಿದ್ದೆ. ಆಗಿನ ಕಾಂಗ್ರೆಸ್ ಸರ್ಕಾರ ಸದನ ಸಮಿತಿ ರಚನೆ ಮಾಡಿತ್ತು. ಆದರೆ ಇಂಧನ ಸಚಿವರನ್ನೆ ಅಧ್ಯಕ್ಷರನ್ನಾಗಿ ಮಾಡಿ ಲೋಪ ಮಾಡಿತ್ತು ಎಂದು ಹೆಚ್.ಡಿಕೆ ತಿಳಿಸಿದರು.

Key words: solar park- project – Congress- illegal-Allegation – former CM -H.D kumaraswamy