ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ವಿಚಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್.

Promotion

ಬೆಂಗಳೂರು,ಜನವರಿ,28,2023(www.justkannada.in): ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್  ಹೊಂದಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ನಾನೇನು ಕುಸ್ತಿ ಆಡಲಾ..? ನಾನು ನೀತಿ ಮೇಲೆ ಹೋಗುತ್ತೇನೆ. ಯಾರ ಮೇಲೂ ವೈಯಕ್ತಿಕ ವಿಚಾರ ಇಲ್ಲ. ಹೆಚ್.ಡಿ ಕುಮಾರಸ್ವಾಮಿ ಪಾರ್ಟಿ ವಿಸರ್ಜನೆ ಮಾಡ್ತೇನೆ ಅಂತಾರೆ. ಕಾರ್ಯಕರ್ತರು ಕಷ್ಪ ಪಟ್ಟು ಪಕ್ಷ ಉಳಿಸಿಕೊಂಡಿದ್ದಾರೆ. ಹಾಗಾಗಿ ಜೆಡಿಎಸ್ ನಿಂದ ನಮ್ಮ ಪಕ್ಷಕ್ಕೆ ಬನ್ನಿ ಎಂದು ಹೇಳ್ತಿದ್ದೇನೆ ಎಂದರು.

ಸರ್ಕಾರದ ವಿರುದ್ದ ನಾನೇನು ಅಸ್ತ್ರ ಉಪಯೋಗಿಸುವ ಅವಶ್ಯಕತೆ ಇಲ್ಲ. ಜನರೇ ಈ ಸರ್ಕಾರವನ್ನ ತೆಗೆಯಬೇಕು ಎಂದು ತೀರ್ಮಾನಿಸಿದ್ದಾರೆ. ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದನ್ನ ಜಾರಿ ಮಾಡಿದ್ದೀರಾ..? ಈ ಹಿಂದೆ ಕೊಟ್ಟ ಭರವಸೆಯನ್ನು ಬಿಜೆಪಿಯವರು ಈಡೇರಿಸಿದ್ದಾರಾ..? ಈ ಸರ್ಕಾರದಲ್ಲಿ ಬರೀ ಭ್ರಷ್ಟಾಚಾರ ನಡೆಯುತ್ತಿದೆ 30 ರಿಂದ 50 ಸಾವಿರ, ಲಕ್ಷಕ್ಕೆ ಮಾರ್ಕ್ಸ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Key words: Soft corner – JDS-KPCC President -DK Shivakumar