“ಸಮಾಜದಿಂದ ಅಸಮಾನತೆ, ಅಸ್ಪೃಶ್ಯತೆ ಕಿತ್ತೆಸೆದಾಗ ಮಾತ್ರ ಅಂಬೇಡ್ಕರ್ ಜನ್ಮದಿನಾಚರಣೆಗೆ ಅರ್ಥ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್” 

ಮೈಸೂರು,ಏಪ್ರಿಲ್,14,2021(www.justkannada.in) :  ಇಂದಿಗೂ ಸಮಾಜದಲ್ಲಿ ಅಸಮಾನತೆ, ದೌರ್ಜನ್ಯ, ಹಾಗೂ ಅಸ್ಪೃಶ್ಯತ ಆಚರಣೆಗಳು ಜೀವಂತವಾಗಿವೆ. ನಾವೆಲ್ಲರೂ ಇಂಥ ಅನಿಷ್ಟ ಪದ್ಧತಿಗಳನ್ನು ನಿರಾಕರಿಸಿ, ಸಮಾಜದಿಂದ ಕಿತ್ತೆಸೆಯುವ ದಿಟ್ಟ ಹೆಜ್ಜೆ ಇಟ್ಟಾಗ ಮಾತ್ರ ಬಾಬಾಸಾಹೇಬರ ಜನ್ಮದಿನಾಚರಣೆಗೆ ಅರ್ಥ ಬರುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

CM,B.S.Y,Statement,atrocious,Extreme,Kodihalli Chandrasekhar

ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ವತಿಯಿಂದ ಆಯೋಜಿಸಿದ್ದ “ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಪಿಎಚ್.ಡಿ ಪದವೀಧರರು, ಸ್ನಾತಕೋತ್ತರ ಮತ್ತು ಸ್ನಾತಕ ಪದವಿಗಳಲ್ಲಿ ಪ್ರಥಮ ರ್ಯಾಂಕ್ ಪಡೆದವರಿಗೆ ಅಭಿನಂದನಾ ಸಮಾರಂಭ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಬಯಸಿದ ಸದೃಢ ಭಾರತವನ್ನು ಸಕಾರಗೊಳಿಸುವಂತಹ ಪ್ರಭುತ್ವವನ್ನು ನಾವೆಲ್ಲರೂ ಕಟ್ಟಬೇಕಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವಂತೆ ಭಾರತವನ್ನು ಕಾಣಲಾಗದೇ ಇರುವುದು ಇಂದಿನ ದುರಂತ ಎಂದು ಬೇಸರವ್ಯಕ್ತಪಡಿಸಿದರು.

ಹೊಸಭಾರತವನ್ನು ಸೃಷ್ಟಿಸಿದ ಮಹಾಚೇತನ, ಸಾಮಾಜಿಕ ಬದಲಾವಣೆಗೆ ಭಾರತವನ್ನು ಸಜ್ಜುಗೊಳಿಸುವ ಮೂಲಕ ಶೋಷಿತರ ಬದುಕಿನಲ್ಲಿ ಆಶಾಕಿರಣವನ್ನು ಮೂಡಿಸಿದರು. ಇಂದು ಜಗತ್ತಿನಲ್ಲಿಯೇ ಹೆಚ್ಚು ಪ್ರತಿಮೆಗಳು ಯಾರದೆಂದರೆ ಅದು ಅಂಬೇಡ್ಕರ್ ಅವರದಾಗಿದೆ ಎಂದು ಹೇಳಿದರು.

 society-Inequality-Untouchability-When thrown-Only- Ambedkar's-Birthday-Meaning-Chancellor-Prof.G.Hemant Kumar

ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಈ ಮಹಾನಾಯಕನ ಅಧ್ಯಯನಗಳು ಮತ್ತು ಸಂಶೋಧನೆಗಳು ನಡೆಯುತ್ತಿವೆ. ಮೌಲ್ವಿಕ ನೆಲೆ, ಪ್ರಗತಿಪರ ನಲೆ, ಮಾನವೀಯ ನೆಲೆ ಇವುಗಳಲ್ಲಿ ಬಾಬಾಸಾಹೇಬರು ಎಲ್ಲಾ ಕಾಲದಲ್ಲೂ ಜೀವಂತವಾಗಿರುತ್ತಾರೆ ಎಂದರು.

ಸಮಕಾಲೀನ ವಿವಿಧ ಸಮಾಜಗಳು ತಮ್ಮದಾಗಿಸಿಕೊಳ್ಳುವ ಮೂಲಕ ಪ್ರಬುದ್ಧರಾಗಬೇಕು. ಆಗಾ ಮಾತ್ರ ಬಾಬಾಸಾಹೇಬರ ಆಶಯಗಳಿಗೆ ಅರ್ಥ ಬರುತ್ತದೆ. ಮೈಸೂರು ವಿಶ್ವವಿದ್ಯಾನಿಲಯವು, ಬಾಬಾಸಾಹೇಬರ ಅಧ್ಯಯನದಲ್ಲಿ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿದೆ. ಈ ವಿಶ್ವಜ್ಞಾನಿಯನ್ನು ಕುರಿತು ಸ್ನಾತಕ ಹಂತದಲ್ಲಿ ಒಂದು ಐಚ್ಛಿಕ ವಿಷಯವಾಗಿ ಈಗಾಗಲೇ ಜಾರಿಗೆ ತಂದಿರುವುದಕ್ಕೆ ಹಾಗೂ ಬುದ್ದ ಕೇಂದ್ರವನ್ನು ನನ್ನ ಆಧಿಕಾರಾವಧಿಯಲ್ಲಿ ಪ್ರಾರಂಭಿಸಿರುವುದು ತೃಪ್ತಿಯನ್ನು ಉಂಟುಮಾಡಿದೆ ಎಂದು ಸಂತೋಷವ್ಯಕ್ತಪಡಿಸಿದರು.

ಪ್ರಜ್ಞೆ, ಕರುಣೆ ಮತ್ತು ಸಮತಾ ತತ್ವಗಳ ಮೂಲಕ ಎಲ್ಲರನ್ನು ಒಳಗೊಳ್ಳುವ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಸಂವಿಧಾನಾತ್ಮಕವಾಗಿ ತೊರಿಸಿಕೊಟ್ಟ ಮಹಾನಾಯಕ. ತಾವೆಂದೂ ಸ್ವಾರ್ಥಿಯಾಗದೆ ಸ್ವಾವಲಂಭಿಯಾಗಿ ಸಮುದಾಯಗಳಿಗೆ ಶಕ್ತಿಯನ್ನು ಕೊಟ್ಟವರು  ಅಂಬೇಡ್ಕರ್ ಅವರು. ಆದಿಯಿಂದಲೂ ಅಂತ್ಯದವರೆಗೂ ಜ್ಞಾನದ ಹಸಿವಿನ ಪಯಣದಲ್ಲೇ ಸಾಗುತ್ತಾ ಬರೆಯುತ್ತಾ, ಸಂಘಟಿಸುತ್ತಾ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಹರಿಯಾಣ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಾಜಶೇಖರ ವುಂಡ್ರು ಅವರು ಅಂಬೇಡ್ಕರ್ ಪರಿಕಲ್ಪನೆಯ ಪ್ರಾತಿನಿಧಿಕ ಪ್ರಜಾಪ್ರಭುತ್ವದ ನಡೆ ಪ್ರಬುದ್ಧ ಭಾರತದ ಕಡೆಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಇದಕ್ಕೂ ಮುನ್ನಾ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಪಿಎಚ್.ಡಿ ಪದವೀಧರರು, ಸ್ನಾತಕೋತ್ತರ ಮತ್ತು ಸ್ನಾತಕ ಪದವಿಗಳಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

society,Inequality,Untouchability,When thrown,Only,Ambedkar's,Birthday,Meaning,Chancellor,Prof.G.Hemant Kumar

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ರಂಗತಜ್ಞ ಸಿ.ಬಸವಲಿಂಗಯ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿಶೇಷ ಘಟಕ ಉಪಕುಲಸಚಿವ ಪ್ರೊ.ಎಸ್.ಮಹಾದೇವಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಇತರರು ಉಪಸ್ಥಿತರಿದ್ದರು.

ENGLISH SUMMARY…..

Ambedkar Jayanthi celebrations will become meaningful only when there is no inequality, untouchability in the society
Mysuru, Apr. 14, 2021 (www.justkannada.in): “Inequality, exploitation, and untouchability exist even today in our society. Celebrating Ambedkar Jayanthi will become meaningful only when all these disappear from the society,” opined Prof. G. Hemanth Kumar, Vice-Chancellor, University of Mysore.
He inaugurated a program organized by the Dr. B.R. Ambedkar Research Extension Centre and SC/ST Special unit, University of Mysore to felicitate rank holders and Ph.D. holders belonging to SC/ST communities, on the occasion of Dr. B.R. Ambedkar’s 130th Jayanthi, held at the Vishwajnani auditorium in Manasagangotri.
In his address, he expressed his view that it is very sad to see that the ethics that exist in our constitution in fact doesn’t exist in the society. “We all have to build a democracy that makes India stronger as dreamt by Dr. B.R. Ambedkar,” he said.
“Ambedkar is the person who created a new India. He brought a new ray of hope among the downtrodden by preparing our country for a social change. As a result of this today, Ambedkar has the most number of statues in the entire world. Studies and researches on Ambedkar are held in prestigious educational institutions across the world today. Babasaheb Ambedkar’s principles exists even today in values, progress, and humanitarian grounds,” he added.society,Inequality,Untouchability,When thrown,Only,Ambedkar's,Birthday,Meaning,Chancellor,Prof.G.Hemant Kumar
Dr. Rajashekar Vundru, Additional Chief Secretary, Government of Haryana presented a special lecture on the occasion.
SC/ST students who have obtained Ph.D. and ranks in degree and post-graduate courses were felicitated on the occasion.
Prof. R. Shivappa, Registrar, University of Mysore, C. Basavalingaiah, Theater Expert, Prof. S. Mahadevamurthy, Deputy Registrar, SC, and ST Special Unit, Prof. J. Somashekar, Director, Dr. B.R. Ambedkar Research and Extension Centre, University of Mysore were present.
Keywords: Dr. B.R. Ambedkar’s 130th Jayanthi/ University of Mysore/ society

key words : society-Inequality-Untouchability-When thrown-Only- Ambedkar’s-Birthday-Meaning-Chancellor-Prof.G.Hemant Kumar