ಸಿಸಿಬಿ ವಿಚಾರಣೆ ಬಳಿಕ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದೇನು…?

Promotion

ಬೆಂಗಳೂರು,ಸೆಪ್ಟೆಂಬರ್.12,2020(www.justkannada.in) : ಗಂಭೀರ ವಿಚಾರದಲ್ಲಿ ಹಿಟ್ ಅ್ಯಂಡ್ ರನ್ ಮಾಡಲ್ಲ. ಸಿಸಿಬಿ ಅಧಿಕಾರಿಗಳಿಗೆ ಶೇಖ್ ಫಾಝಿಲ್ ಹಾಗೂ ಶಾಸಕ ಜಮೀರ್  ಅಹ್ಮದ್ ಖಾನ್ ಅವರ ನಂಟಿಗೆ ಸಂಬಂಧಿಸಿದ ದಾಖಲೆ ಮಾತ್ರವೇ ನೀಡಿದ್ದು, ನಟಿ ಸಂಜನಾ ಗಲ್ರಾನಿ ಸೇರಿದಂತೆ ಯಾವುದೇ ನಟ, ನಟಿಯರ ದಾಖಲೆ ನೀಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದರು.jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಶನಿವಾರ ಸಿಸಿಬಿ ಕಚೇರಿಗೆ ಹಾಜರಾಗಿ ತಮ್ಮ ಬಳಿ ಇದ್ದ ದಾಖಲೆಗಳನ್ನು ಒದಗಿಸಿ, ಸಿಸಿಬಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಬಂದಿರುವುದಾಗಿ ಮಾದ್ಯಮದವರಿಗೆ ತಿಳಿಸಿದರು.

Society-after-CCB-inquiry-servant-Prashant Sambari-say?

ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನನ್ನ ಬಳಿ ಇದ್ದ ಡಿಜಿಟಲ್ ದಾಖಲೆಗಳನ್ನು ನೀಡಿದ್ದು, ನಾನು ನೀಡಿರುವ ದಾಖಲೆಗಳು ಸಾಕಾಗದ ಹಿನ್ನೆಲೆಯಲ್ಲಿ ಮತ್ತೆ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ನಾನು ನೀಡಿರುವ ದಾಖಲೆ ಬಗ್ಗೆ  ಬಹಿರಂಗಪಡಿಸುವುದಕ್ಕೆ ಆಗುವುದಿಲ್ಲ. ಗಂಭೀರ ವಿಚಾರದಲ್ಲಿ ಹಿಟ್ ಆ್ಯಂಡ್ ರನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ನಟ, ನಟಿಯರ ಬಗ್ಗೆ ದಾಖಲೆ ನೀಡಿಲ್ಲ

ನಟಿ ಸಂಜನಾ ಗಲ್ರಾನಿ ಸೇರಿದಂತೆ ಯಾವುದೇ ನಟ, ನಟಿಯರ ಬಗ್ಗೆ ದಾಖಲೆ ನೀಡಿಲ್ಲ. ಐಡಿ ಇಡಿ ಕುರಿತು ಏನು ಮಾತನಾಡಿಲ್ಲ. ರಾಜಕೀಯಕ್ಕೂ, ನನಗೂ ದೂರ. ಜಮೀರ್ ಅವರು ಬಿಜೆಪಿ ವಕ್ತಾರ ಎಂದು ಕರೆದಿದ್ದು, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರೆ ಕಾಂಗ್ರೆಸ್ ವಕ್ತಾರ ಎನ್ನುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪ್ರೇರಿತನಾಗಿ ಈ ಅಭಿಯಾನ ನಡೆಸುತ್ತಿಲ್ಲ

ನಾನು ಯಾವುದೇ ಪಕ್ಷದ ಪ್ರಾಥಮಿಕ ಸದಸ್ಯನಾಗಿಲ್ಲ. ರಾಜಕೀಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಪಕ್ಷದ ವಕ್ತಾರನಾಗಿ ಕೆಲಸ ಮಾಡುತ್ತಿಲ್ಲ. ರಾಜಕೀಯ ಪ್ರೇರಿತನಾಗಿ ಈ ಅಭಿಯಾನ ನಡೆಸುತ್ತಿಲ್ಲ. ಜಮೀರ್ ಅಹ್ಮದ್ ಖಾನ್ ನೀಡಿರುವ ಎಫ್ ಐ ಆರ್ ನಲ್ಲಿ ಯಾವುದೇ ಹುರಳಿಲ್ಲ. ನನ್ನದೊಂದು ಮಾತು ಸುಳ್ಳಾಗಿದ್ದರೂ ಮುಂದೆ ನೋಡೋಣ ಎಂದು ತಿಳಿಸಿದರು.

key words : Society-after-CCB-inquiry-servant-Prashant Sambari-say?