ಸಂಸ್ಕೃತಿಯ ಮೇಲೂ ಸಾಮಾಜಿಕ ಮಾಧ್ಯಮಗಳು ಪ್ರಭಾವ ಬೀರುತ್ತಿವೆ-ಕುಲಪತಿ ಡಾ.ಬಿ.ಕೆ.ರವಿ.  

Promotion

ಬೆಂಗಳೂರು,ಜುಲೈ11,2023(www.justkannada.in):  ಸಂವಹನದ ಅತ್ಯಂತ ಶಕ್ತಿಯುತ ಅಂಗವಾಗಿ ಬೆಳೆಯುತ್ತಿರುವ ‘ಸಾಮಾಜಿಕ ಮಾಧ್ಯಮ’ಗಳು ಇಂದು ಸಂಸ್ಕೃತಿಯ ಮೇಲೂ ದುಷ್ಪರಿಣಾಮ ಬೀರುತ್ತಿವೆ” ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ. ರವಿ ಅಭಿಪ್ರಾಯಪಟ್ಟರು.

ನ್ಯಾಷನಲ್ ಕಾಲೇಜು ಜಯನಗರದ  ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ‘ಸೋಶಿಯಲ್ ಮೀಡಿಯಾ ಅಂಡ್ ಕಲ್ಚರಲ್ ಚೇಂಜ್’ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಡಾ.ಬಿ.ಕೆ. ರವಿ ಅವರು ಮಾತನಾಡಿದರು

ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಯುವಜನತೆಯಲ್ಲಿ ಇದೊಂದು ವ್ಯಸನವಾಗುತ್ತಿದೆ. ಹೀಗಾಗಿ ಬಹುಬೇಗ ಅನ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ಸಾಮಾಜಿಕ ಜಾಲತಾಣಗಳ ಸದ್ಬಳಕೆ, ಉಪಯೋಗಗಳ ಮೇಲೂ ಬೆಳಕು ಚೆಲ್ಲಿದರು.

ಇದೇ ವೇಳೆ ಪತ್ರಿಕೋದ್ಯಮ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಹೊರ ತಂದ ಕ್ಲಾಸ್ ಮ್ಯಾಗಜಿನ್ ‘ಸ್ಪೆಕ್ಟರಂ’ ಮತ್ತು ಕ್ಯಾಂಪಸ್ ಪತ್ರಿಕೆ ‘ದಿ ಎನ್.ಸಿ.ಜೆ ಟೈಮ್ಸ್’ ಅನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಕಾಲೇಜು ಜಯನಗರದ ಅಧ್ಯಕ್ಷರಾದ ಡಾ.ಎಚ್.ಎನ್. ಸುಬ್ರಹ್ಮಣ್ಯ, ಪದವಿ ಕಾಲೇಜಿನ  ಪ್ರಾಂಶುಪಾಲರಾದ ಡಾ.ಬಿ.ಸುರೇಶ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಮತಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಎಸ್. ಜಯಸಿಂಹ, ಸಹಾಯಕ ಪ್ರಾಧ್ಯಾಪಕಿ ಡಾ. ವೈಶಾಲಿ ಎಚ್.ಬಿ. ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Key words: Social media –also- influencing- culture-VC- Dr. B.K. Ravi.