ಹಾವು ಮಾರಾಟಕ್ಕೆ ಯತ್ನ, ನಾಲ್ವರ ಬಂಧನ…!

Promotion

ಮೈಸೂರು,ಡಿಸೆಂಬರ್,24,2020(www.justkannada.in) : ಎರಡು ತಲೆ ಹಾವೆಂದು ಜನರನ್ನು ನಂಬಿಸಿ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಅರಣ್ಯ ಸಂಚಾರಿ ದಳ ಸಿಬ್ಬಂದಿ ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.Teachers,solve,problems,Government,bound,Minister,R.Ashokಕುಮಾರ್(32), ಶಿವಪ್ರಕಾಶ್ (32), ರವೀಶ್(44),ಚಂದ್ರ(38) ಬಂಧಿತರು. ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮೋಸ ಮಾಡಿ ಹಾವು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಸೆರೆ ಹಿಡಿದಿದ್ದಾರೆ.

snake-Attempt-sale-arrest-four ...!

ಬಂಧಿತರಿಂದ ಒಂದು ಮಾರುತಿ ವ್ಯಾನ್, ಮೂರು ದ್ವಿಚಕ್ರ ವಾಹನ, ಬ್ಯಾಗ್ ನಲ್ಲಿದ್ದ ಮಣ್ಣು ಮುಕ್ಕ ಹಾವು ವಶಕ್ಕೆ ಪಡೆಯಲಾಗಿದೆ.

snake-Attempt-sale-arrest-four ...!

ಮನೆಯಲ್ಲಿ ಈ ಹಾವು ಇದ್ದರೆ ಆರ್ಥಿಕ ಪ್ರಗತಿಯಾಗುತ್ತೆ. ಎಲ್ಲವೂ ಒಳಿತಾಗುತ್ತದೆ ಎಂದು ನಂಬಿಸಿ ವಂಚಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

key words : snake-Attempt-sale-arrest-four …!