ಮಲ್ಲೇಶ್ವರಂ ಕ್ಷೇತ್ರದ ಸರಕಾರಿ ಶಾಲೆಗಳಿಗೆ 70 ಸ್ಮಾರ್ಟ್ ಟಿವಿ ವಿತರಣೆ.

Promotion

ಬೆಂಗಳೂರು,ಮಾರ್ಚ್,9,2023(www.justkannada.in):  ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ 23 ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ನೆರವಿಗೆ ಇಂಡೋಮಿಮ್ ಕಂಪನಿಯ ವತಿಯಿಂದ 70 ಸ್ಮಾರ್ಟ್ ಟಿ.ವಿ.ಗಳನ್ನು ವಿತರಿಸಲಾಯಿತು.

ಗುರುವಾರ ಇದರ ಅಂಗವಾಗಿ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಮತ್ತೀಕೆರೆ ಸರಕಾರಿ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಕಂಪನಿಯ ಅಧ್ಯಕ್ಷ ಜಯರಾಂ ಅವರು ಈ ಸಾಧನಗಳನ್ನು ಸಚಿವರ ಮೂಲಕ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, “ಜಯರಾಂ ಅವರು ಈಗ ಕೊಟ್ಟಿರುವುದು ಸೇರಿದಂತೆ ಇದುವರೆಗೆ ಒಂದು ಕೋಟಿ ರೂಪಾಯಿ ಮೊತ್ತದ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ಗಳನ್ನು ಕ್ಷೇತ್ರದ ಶಾಲೆಗಳಿಗೆ ಕೊಟ್ಟಿದ್ದಾರೆ. ಈಗ ಬಡವರ ಮಕ್ಕಳ ಸುಗಮ ಕಲಿಕೆಗೆ 50 ಇಂಚಿನ ಐವತ್ತು ಟಿ.ವಿ.ಗಳನ್ನು ಕೊಟ್ಟಿದ್ದಾರೆ. ಇದು ಅನುಕರಣಯೋಗ್ಯ ಸಂಗತಿಯಾಗಿದೆ” ಎಂದರು.

ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರಕಾರಿ ಶಾಲೆಗಳಲ್ಲಿ ಈವರೆಗೆ 1,400 ಟ್ಯಾಬ್ ಮತ್ತು 23 ಸ್ಮಾರ್ಟ್ ಬೋರ್ಡ್ ಕೊಡಲಾಗಿದೆ. ಇದರಿಂದ ಆಧುನಿಕ ಮತ್ತು ವೈಜ್ಞಾನಿಕ ಕಲಿಕೆ ಸಾಧ್ಯವಾಗಿದೆ. ಈ ಮೂಲಕ ಎಲ್ಲ ಶಾಲೆಗಳೂ ಸ್ಮಾರ್ಟ್ ಆದಂತಾಗಿವೆ ಎಂದು ಅವರು ನುಡಿದರು.

ಮಕ್ಕಳು ಶಾಲೆಯಲ್ಲಿ ಓದು, ಆಟ ಮತ್ತು ಕುಣಿತ ಎಲ್ಲವನ್ನೂ ಅನುಭವಿಸಬೇಕು. ರಾಜ್ಯದ ಪದವಿ‌ ಕಾಲೇಜುಗಳಲ್ಲಿ 9,000 ಕೊಠಡಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ಇಂದು ಕಲಿಕೆಯ ಜತೆಗೆ ಕೌಶಲ್ಯಾಭಿವೃದ್ಧಿಗೂ ಒತ್ತು ಕೊಡಲಾಗುತ್ತಿದೆ. ಇಂತಹ ಶೈಕ್ಷಣಿಕ ಉಪಕ್ರಮ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಯುವಜನರಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸಬೇಕು ಎನ್ನುವುದೇ ಸರಕಾರದ ಗುರಿ ಆಗಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Smart TVs -donated – government schools – minister Ashwath narayan

ENGLISH SUMMARY…

Smart TVs donated to government schools

Bengaluru: Smart TVs were donated to government schools in the Malleswara constituency on Thursday.

Mr Jayaram, Chairperson of IndoMim presented smart TVs on behalf of the company in presence of Dr CN Ashwath Narayan, Minister and MLA of the constituency in a programme held at the government model School, Mattikere. As many as 70 TVs measuring 50 inches were donated to 23 government schools.

Speaking on the occasion, Narayan said, Jayaram has so far donated equipment worth Rs 1 crore including the previously donated tabs and laptops to the schools in the Malleswara constituency.

Government schools in the constituency have been so far given 1,400 tabs and 23 smart boards to facilitate modern and scientific ways of learning. This also ensures that all the government schools in the constituency have become smart, he informed.

Officials of the Education Department were present.