ಸಿನಿಮಾ ಆಗುತ್ತಿದೆ ಎಸ್.ಎಲ್.ಭೈರಪ್ಪರ ‘ಪರ್ವ’ ಕಾದಂಬರಿ: ವಿವೇಕ್ ಅಗ್ನಿಹೋತ್ರಿದ ಸಿನಿಮಾ ಟೈಟಲ್ ಲಾಂಚ್

Promotion

ಬೆಂಗಳೂರು, ಅಕ್ಟೋಬರ್ 22, 2023 (www.justkannada.in): ಖ್ಯಾತ ಲೇಖಕ ಎಸ್​.ಎಲ್​. ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ಆಧರಿಸಿ  ‘ದಿ ಕಾಶ್ಮೀರ್​ ಫೈಲ್ಸ್​’, ‘ದಿ ವ್ಯಾಕ್ಸಿನ್​ ವಾರ್​’ ಖ್ಯಾತಿಯ ವಿವೇಕ್​ ಅಗ್ನಿಹೋತ್ರಿ ಸಿನಿಮಾ ಮಾಡುತ್ತಿದ್ದಾರೆ.

ಈ ಸಿನಿಮಾ ಮೂರು ಭಾಗಗಳಲ್ಲಿ ​ಗಳಲ್ಲಿ ಬರುತ್ತದೆ ಎಂದು ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ‘ಪರ್ವ’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಅಂದಹಾಗೆ ಸ್ವತಃ ಎಸ್​.ಎಲ್​. ಭೈರಪ್ಪ ಅವರೇ ಟೈಟಲ್​ ಲಾಂಚ್​ ಮಾಡಿದ್ದಾರೆ.

ಅಂದಹಾಗೆ ಪ್ರಕಾಶ್​ ಬೆಳವಾಡಿ ಅವರು ‘ಪರ್ವ’ ಕೃತಿಯನ್ನು ಆಧರಿಸಿದ ಇಂಗ್ಲಿಷ್​ ನಾಟಕಕ್ಕೆ ನಿರ್ದೇಶನ ಮಾಡಿದ್ದಾರೆ. ಇದು 8 ಗಂಟೆ ಅವಧಿಯ ದೀರ್ಘ ನಾಟಕ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಈ ನಾಟಕ ಪ್ರದರ್ಶನವಾಗಿದೆ.

ಸಿನಿಮಾ ಕುರಿತು ಮಾತನಾಡಿರುವ ವಿವೇಕ್​ ಅಗ್ನಿಹೋತ್ರಿ, ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್​ಗಳಲ್ಲಿ ಬರುತ್ತದೆ ಎಂದಿದ್ದಾರೆ.