ನಾನೊಬ್ಬ ನುರಿತ ರಾಜಕಾರಣಿ: ಮಂತ್ರಿಯಾಗುವ ಸೌಭಾಗ್ಯ ಬಂದೇ ಬರುತ್ತೆ- ಶಾಸಕ ಉಮೇಶ್ ಕತ್ತಿ…

Promotion

ಬೆಳಗಾವಿ,ನವೆಂಬರ್,14,2020(www.justkannada.in): ನಾನೊಬ್ಬ ನುರಿತ ರಾಜಕಾರಣಿ. 8 ಬಾರಿ ಶಾಸಕನಾಗಿದ್ದೇನೆ.  ಮಂತ್ರಿಯಾಗುವ ಸೌಭಾಗ್ಯ ಬಂದೇ ಬರುತ್ತೆ ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.Karnataka-bjp-c.t.ravi-minister-tourism-information

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಉಮೇಶ್ ಕತ್ತಿ, ಸಂಪುಟ ವಿಸ್ತರಣೆ ವೇಳೆ ನನಗೂ ಸಚಿವ ಸ್ಥಾನ ನೀಡುವ ಭರವಸೆಯಿದೆ. ನಾನೊಬ್ಬ ನುರಿತ ರಾಜಕಾರಣಿ. 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಬಿಎಸ್ ವೈ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ. ಸಚಿವ ಕೊಟ್ಟರೇ ಸಂತೋಷ ಕೊಡದಿದ್ದರೂ ಸಂತೋಷ ಎಂದರು.skilled –politician-  Ibecome – minister-MLA Umesh katti

 ಸಚಿವ ಸ್ಥಾನಕ್ಕಾಗಿ ನಾನು ಯಾರೊಬ್ಬರ ಬೆನ್ನು ಹತ್ತಿ ಹೋಗಲ್ಲ. ಸಚಿವ ಸ್ಥಾನ ನೀಡಿದರೆ ಕೆಲಸ ಮಾಡಿ ತೋರಿಸುತ್ತೇನೆ. ಇಲ್ಲವಾದಲ್ಲಿ ಶಾಸಕನಾಗೇ ಮುಂದುವರೆಯುತ್ತೇನೆ. ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೇ ಕೆಲಸ ಮಾಡುತ್ತೇನೆ. ದೀಪಾವಳಿ ಮುಗಿದ ಬಳಿಕ ಸಂಪುಟ ವಿಸ್ತರಣೆ ಎಂದಿದ್ದಾರೆ. ಬಿಎಸ್ ಯಡಿಯೂರಪ್ಪ ಮಂತ್ರಿ ಮಾಡುವ ವಿಶ್ವಾಸವಿದೆ.

Key words:  skilled –politician-  Ibecome – minister-MLA Umesh katti