ಆರು ವರ್ಷ ವಿಚಾರಣೆ: ಐಎಎಸ್ ಅಧಿಕಾರಿಗೆ 1 ರೂ. ಮಾನನಷ್ಟ ಪರಿಹಾರ ಸೂಚಿಸುವಂತೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ತೀರ್ಪು

Promotion

ಶಿವಮೊಗ್ಗ, ಜನವರಿ 12, 2019 (www.justkannada.in): ಐಎಎಸ್ ಅಧಿಕಾರಿಗೆ ಒಂದು ರೂ. ಮಾನನಷ್ಟ ಪರಿಹಾರ ನೀಡುವಂತೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ ಅವರು ಈ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ, ಪ್ರಸ್ತುತ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿ. ಪೊನ್ನುರಾಜ್‌ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು.

ಇದೀಗ ಮೊಕದ್ದಮೆಯ ಅರ್ಜಿ ಇತ್ಯರ್ಥ ಪಡಿಸಿರುವ ನ್ಯಾಯಾಲಯ 1 ರೂ. ನಷ್ಟವನ್ನು ನೀಡುವಂತೆ ಐಎಎಸ್ ಅಧಿಕಾರಿಗೆ ಆದೇಶ ನೀಡಿದೆ. ಮೊಕದ್ದಮೆಯೊಂದರಲ್ಲಿ 1 ರೂ. ದಂಡವನ್ನು ಪಾವತಿ ಮಾಡಬೇಕು ಆದೇಶ ನೀಡಿದೆ.

ಕೆ. ಶಿವಪ್ಪ ವಿರುದ್ಧ 2011ರ ಏಪ್ರಿಲ್ 5ರಂದು ಶಿವಮೊಗ್ಗದ ಎ. ಎಂ. ಮಹದೇವಪ್ಪ ಅಂದಿನ ಜಿಲ್ಲಾಧಿಕಾರಿ ವಿ. ಪೊನ್ನುರಾಜ್‌ಗೆ ದೂರು ನೀಡಿದ್ದರು. ಕೆ. ಶಿವಪ್ಪ ನಿವೃತ್ತರಾದರೂ ಕಂದಾಯ ಇಲಾಖೆಯ ಸಾರ್ವಜನಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ದೂರಾಗಿತ್ತು.

ವಿ. ಪೊನ್ನುರಾಜ್ ಈ ದೂರಿನ ವಿಚಾರಣೆ ನಡೆಸದೇ, ಶಿವಪ್ಪಗೆ ಯಾವುದೇ ನೋಟಿಸ್ ನೀಡದೆ ಆದೇಶವೊಂದನ್ನು ಹೊರಡಿಸಿದ್ದರು. ಅದರ ಪ್ರಕಾರ ಶಿವಪ್ಪ ಯಾವುದೇ ಇಲಾಖೆಗಳಿಗೆ ಹೋಗಬಾರದೆಂದು ನಿರ್ಬಂಧಿಸಲಾಗಿತ್ತು. ಇಲ್ಲಾ ಇಲಾಖೆಗಳಲ್ಲೂ ಈ ಕುರಿತ ಸುತ್ತೋಲೆ ಹಾಕಲಾಗಿತ್ತು.