ರಾಜೀನಾಮೆ ನೀಡುವ ಸನ್ನಿವೇಶ ಇನ್ನು ಬಂದಿಲ್ಲ- ಸಿಎಂ ಹೆಚ್.ಡಿ ಕುಮಾರಸ್ವಾಮಿ….

Promotion

ಬೆಂಗಳೂರು,ಜು,11,2019(www.justkannada.in): ಶಾಸಕರ ರಾಜೀನಾಮೆ ಪರ್ವ ಮುಂದುವರೆದು ಸಮ್ಮಿಶ್ರ ಸರ್ಕಾರ ಕುಸಿಯುವ ಹಂತದಲ್ಲಿದ್ದರೂ ಕಾಂಗ್ರೆಸ್-ಜೆಡಿಎಸ್ ನಾಯಕರು ಸರ್ಕಾರ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದು, ಈ ನಡುವೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ  ಸಿಎಂ ಹೆಚ್.ಡಿ ಕುಮಾರಸ್ವಾಮಿ ನಾನಿನ್ನು ರಾಜೀನಾಮೆ ನೀಡುವ ಸನ್ನಿವೇಶ ಬಂದಿಲ್ಲ ಎಂದಿದ್ದಾರೆ.

ಇಂದು ಕಾಂಗ್ರೆಸ್ ನಾಯಕರು ಕೆ.ಕೆ ಗೆಸ್ಟ್ ಹೌಸ್ ನಲ್ಲಿ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಮತ್ತತರರು ಉಪಸ್ಥಿತರಿದ್ದರು.

ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾನೇಕೆ ರಾಜೀನಾಮೆ ನೀಡಲಿ..?  2008 09ರಲ್ಲಿ ಸರ್ಕಾರದಲ್ಲಿ ಏನಾಗಿತ್ತು..? ಎಂದು  ಬಿಎಸ್ ವೈ ಸರ್ಕಾದರ ಬಗ್ಗೆ ಉಲ್ಲೇಖಿಸಿ ಮಾಧ್ಯಮಗಳಿಗೆ ಪ್ರಶ್ನಿಸಿದರು.

ನಾನಿನ್ನು ರಾಜೀನಾಮೆ ಕೊಡುವ ಸನ್ನಿವೇಶ ಬಂದಿಲ್ಲ. ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words:  situation – resignation – not come-CM HD Kumaraswamy.