ಶಿವಣ್ಣನ ‘ಭಜರಂಗಿ-2’ ಹಾಡಿಗೆ ದನಿಯಾದ ತೆಲುಗಿನ ಟಾಪ್ ಸಿಂಗರ್!

Promotion

ಬೆಂಗಳೂರು, ಏಪ್ರಿಲ್ 10, 2021 (www.justkannada.in): 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ-2’ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿರುವ ಈ ಹಾಡನ್ನು ತೆಲುಗಿನ ಟಾಪ್ ಗಾಯಕ ಸಿದ್ ಶ್ರೀರಾಮ್ ಹಾಡಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.

ಅಂದಹಾಗೆ ಸಿದ್ ಶ್ರೀರಾಮ್ ಹಾಡಿರುವ ಎರಡನೇ ಕನ್ನಡ ಹಾಡು ಇದು. ಇದಕ್ಕೂ ಮುಂಚೆ ‘ಟಾಮ್ ಅಂಡ್ ಜೆರ್ರಿ’ ಚಿತ್ರದಲ್ಲಿ ಹಾಡೊಂದಕ್ಕೆ ದನಿಯಾಗಿದ್ದಾರೆ.

ಅಲ್ಲು ಅರ್ಜುನ್ ಅಭಿನಯಿಸಿದ್ದ ‘ಅಲಾ ವೈಕುಂಠಪುರಂಲೋ’ ಚಿತ್ರದಲ ‘ಸಾಮಜವರಗಮನ’, ಗೀತಾ ಗೋವಿಂದಂ, ಟ್ಯಾಕ್ಸಿವಾಲಾ, 2.0, ಡಿಯರ್ ಕಾಮ್ರೆಡ್, ವಕೀಲ್ ಸಾಬ್, ರಂಗ್‌ದೇ, ತಮಿಳಿನಲ್ಲಿ ಮಾರ, ಸೈಕೋ, ಎನ್‌ಜಿಕೆ, ವಿಶ್ವಾಸಂ, ವಡಾ ಚೆನ್ನೈ, 2.0, ಮೆರ್ಸಲ್ ಸೇರಿದಂತೆ ಅನೇಕ ಸಿನಿಮಾಗಳ ಹಾಡಿದೆ ಸಿದ್ ದನಿಯಾಗಿದ್ದಾರೆ.