ಮಣ್ಣಲ್ಲಿ ಮಣ್ಣಾದ ಸಿಂದಗಿ ಶಾಸಕ ಎಂ.ಸಿ ಮನಗೊಳಿ…

Promotion

ವಿಜಯಪುರ,ಜನವರಿ,29,2021(www.justkannada.in): ಅನಾರೋಗ್ಯದಿಂದ ನಿಧನರಾದ ಸಿಂದಗಿ ಶಾಸಕ ಎಂ.ಸಿ. ಮನಗೂಳಿ (85) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು.jk

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಶಿಕ್ಷಣ ಪ್ರಚಾರ ಮಂಡಳಿ ಆವರಣದಲ್ಲಿ ಲಿಂಗಾಯತ ಸಂಪ್ರದಾಯದಂತೆ ಶಾಸಕ ಎಂಸಿ ಮನಗೊಳಿ ಅವರ ಅಂತ್ಯಕ್ರಿಯೆ ನೆರವೇರಿತು. ಸಿಂದಗಿ ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಕ್ರಿಯಾ ಸಂಸ್ಕಾರ ಜರುಗಿತು.Sindagi-MLA-  MC managoli- funeral

ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಎಚ್.ಡಿ. ರೇವಣ್ಣ, ಎ.ಎಸ್. ಪಾಟೀಲ ನಡಹಳ್ಳಿ ಸೇರಿ ಹಲವರು ಶಾಸಕ ಮನಗೊಳಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

Key words: Sindagi-MLA-  MC managoli- funeral