ಈ ಬಾರಿ ಸರಳ ದಸರಾ ಆಚರಣೆ: ಕೊರೋನಾ ವಾರಿಯರ್ಸ್ ರಿಂದ ಉದ್ಘಾಟನೆ-ಸಚಿವ ಸಿಟಿ ರವಿ…

Promotion

ಬೆಂಗಳೂರು,ಸೆಪ್ಟಂಬರ್,8,2020(www.justkannada.in):  ಕೊರೋನಾ ಮಹಾಮಾರಿ ಹರಡುತ್ತಿರುವ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಂಪ್ರದಾಯವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.jk-logo-justkannada-logo

ಇಂದು ವಿಧಾನಸೌಧದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ  ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿ,ಟಿ ರವಿ, ಈ ಬಾರಿ ಸರಳ ಮತ್ತು ಸಂಪ್ರದಾಯವಾಗಿ ದಸರಾ ಆಚರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯಕ್ಕೆ 5 ಜನ ಕೊರೋನಾ ವಾರಿಯರ್ಸ್ ರಿಂದ ದಸರಾ ಉದ್ಘಾಟನೆ ಮಾಡಲು ತೀರ್ಮಾನಿಸಲಾಗಿದೆ. ಮತ್ತೆ ಯಾರನ್ನಾದ್ರು ಸೇರಿಸಬೇಕಾ ಅಂತ ಮೈಸೂರು ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ. ಇನ್ನು ಅರಮನೆಗೆ ಮಾತ್ರ ಈ ಬಾರಿ ಜಂಬೂ ಸವಾರಿ ಸೀಮಿತವಾಗಿರಲಿದೆ ಎಂದು ಮಾಹಿತಿ ನೀಡಿದರು.simple-dasara-celebration-minister-ct-ravi

2002-03 ರಲ್ಲಿ ಸರಳ ದಸರಾ ಆಗಿತ್ತಂತೆ. ಈಗ ಮತ್ತೆ ಈ ಬಾರಿ ಸರಳ ದಸರಾ ನಡೆಯುತ್ತಿದೆ. ಸರಳ ಸಂಪ್ರದಾಯಕ್ಕೆ ಅವಶ್ಯಕವಾದ ಅನುದಾನ ಸರ್ಕಾರ ಬಿಡುಗಡೆ ಮಾಡುತ್ತದೆ. ಸಿಎಂ 10 ಕೋಟಿ, ಮೂಡಾದಿಂದ 5 ಕೋಟಿ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ದಸರಾ ವೇಳೆ ಪ್ರಮುಖ ಸರ್ಕಲ್ ಗಳಲ್ಲಿ ದೀಪಾಲಂಕಾರ ಇರುತ್ತದೆ. ಅದು ಬಿಟ್ಟು ಕೇವಲ ಚಾಮುಂಡಿ ಬೆಟ್ಟ ಮತ್ತು ಅರಮನೆಗೆ ಮಾತ್ರ ಈ ಬಾರಿ ದಸರಾ ಸೀಮಿತವಾಗಲಿದೆ ಎಂದು ಸಚಿವ ಸಿ.ಟಿ ರವಿ ತಿಳಿಸಿದರು.

Key words: simple Dasara-celebration- -Minister –CT- Ravi