ಜಾತಿವಾರು ಜನಗಣತಿ ವರದಿ ಬಿಡುಗಡೆಗಾಗಿ ಸಹಿ ಸಂಗ್ರಹ ಅಭಿಯಾನ

kannada t-shirts

ಮೈಸೂರು,ಅಕ್ಟೊಂಬರ್,03,2020(www.justkannada.in) : ಜಾತಿವಾರು ಜನಗಣತಿ ವರದಿ ಹಾಗೂ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ವರದಿ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.jk-logo-justkannada-logo

ಶನಿವಾರ ನಗರದ ಪುರಭವನದ ಎದುರಿನ ಅಂಬೇಡ್ಕರ್ ಪ್ರತಿಮೆ ಎದುರು ಜಮಾವಣೆಗೊಂಡ ವೇದಿಕೆಯ ಸದಸ್ಯರು ಜಾತಿವಾರು ಜನಗಣತಿ ವರದಿ ಜಾರಿಗೊಳಿಸುವಂತೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಈ ಸಂದರ್ಭ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ 170 ಕೋಟಿ ರೂ. ವೆಚ್ಚದಲ್ಲಿ ಎಚ್.ಕಾಂತರಾಜ ಆಯೋಗವು ದೇಶದಲ್ಲೇ ಪ್ರಥಮ ಬಾರಿಗೆ ಜಾತಿವಾರು ಸಮಗ್ರ ಜನಗಣತಿ ನಡೆಸಿ ವರದಿ ಸಲ್ಲಿಸಿದೆ. ಆದರೆ, ಈ ವರೆಗೆ ಅದನ್ನು ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.Signature-collection-campaign-release-census-report

ಎಚ್.ಕಾಂತರಾಜ ಆಯೋಗವು ಜಾತಿವಾರು ಜನಗಣತಿ ವರದಿಯು ನಿಖರವಾದ, ವೈಜ್ಞಾನಿಕವಾದ ಜನಗಣತಿಯಾಗಿದೆ. ಈ ವರದಿ ಬಿಡುಗಡೆಗೊಳಿಸುವ ಮೂಲಕ ಮೀಸಲಾತಿ ಮರುವರ್ಗಾವಣೆಯಾಗಬೇಕಿದೆ. ಸಾಮಾಜಿಕ ನ್ಯಾಯದ ಮೇಲೆ ಎಲ್ಲಾ ವರ್ಗಗಳಿಗೆ ಸವಲತ್ತು ದೊರೆಯಲು ಸಾಧ್ಯವಿದೆ ಎಂದರು.

ಜನರ ತೆರಿಗೆ ಹಣವನ್ನು ವೆಚ್ಚ ಮಾಡಿ ವರದಿಯನ್ನು ಸಿದ್ಧಪಡಿಸಿದ್ದು, ಅದನ್ನು ಬಿಡುಗಡೆ ಮಾಡದಿರುವುದು ಹಣವನ್ನು ದುಂದುವೆಚ್ಚ ಮಾಡಿದಂತ್ತಾಗುವುದು. ಸರಕಾರಕ್ಕೆ ಹಿಂದುಳಿದ ವರ್ಗಗಳ ಮೇಲೆ ಕಾಳಜಿಯಿದ್ದರೆ, ಈಗಲೇ ಈ ವರದಿಯನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಹೋರಾಟವು ಉಗ್ರ ರೂಪಪಡೆದುಕೊಳ್ಳುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ಲೋಕೇಶ್ ಮಾದಪುರ, .ಕೆ.ರವಿ, ಪುಟ್ಟಸ್ವಾಮಿ, ಡಾ.ಸೋಮಶೇಖರ್ ಗೌಡ ಅನೇಕರು ಭಾಗವಹಿಸಿದ್ದರು.

key words : Signature-collection-campaign-release-census-report

website developers in mysore