ಡಿಸಿಎಂ ಹುದ್ದೆ ಕುರಿತು ಸಹಿ ಸಂಗ್ರಹ ವಿಚಾರ: ಸ್ಪಷ್ಟನೆ ನೀಡಿದ ಶಾಸಕ ಎಂ.ಪಿ ರೇಣುಕಾಚಾರ್ಯ….

Promotion

ತುಮಕೂರು,ಜ,1,2020(www.justkannada.in):  ಡಿಸಿಎಂ ಹುದ್ದೆ ವಿಚಾರ ಕುರಿತು  ನಾನು ಸ್ಪಷ್ಟವಾಗಿ ಹೇಳುತ್ತೇನೆ ಯಾವುದೇ ಸಹಿಸಂಗ್ರಹ ಮಾಡಿಲ್ಲ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮದ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ನಾನು ಡಿಸಿಎಂ ಹುದ್ದೆ ಬಗ್ಗೆ ಸಹಿ ಸಂಗ್ರಹಿಸಿರುವುದಾಗಿ ಎಲ್ಲೂ ಬಹಿರಂಗವಾಗಿ ಹೇಳಿಲ್ಲ. ಇದಕ್ಕೆ ಮುಖ್ಯಮಂತ್ರಿ ಬೆಂಬಲ ಕೊಟ್ಟಿದ್ದಾರೆಂಬುದು ಸುಳ್ಳು. ನಾನು ಈ ವಿಚಾರವನ್ನು ಎಲ್ಲಿ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸಿದ್ದೇನೆ. ನನಗೆ ಯಾರ ಮೇಲೂ ಅಸಮಾಧಾನವಿಲ್ಲ ಎಂದು ಹೇಳಿದರು.

ಇನ್ನು ಈ ವಿಚಾರವಾಗಿ ಬೇಕಿದ್ದರೆ ನನ್ನ ವಿರುದ್ಧ ಕೇಂದ್ರಕ್ಕೆ ದೂರು ನೀಡಬಹುದಿತ್ತು. ಅಥವಾ ಪಕ್ಷದ ವೇದಿಕೆಯಲ್ಲಿ ಈ ಕುರಿತು ಪ್ರಸ್ತಾಪಿಸಬಹುದಿತ್ತು. ಆದರೆ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ರೇಣುಕಾಚಾರ್ಯ ಹೇಳೀದರು.

 

Key words: Signature –Collection- issue – DCM post- MP R Renukacharya-clarification.