ಅಪ್ಪ ವರುಣಾಗೆ ಬಂದ್ರೆ ನಾನು ಸ್ಪರ್ಧಿಸಲ್ಲ- ಶಾಸಕ ಯತೀಂದ್ರ ಸಿದ್ಧರಾಮಯ್ಯ.

Promotion

ಮೈಸೂರು,ಮಾರ್ಚ್,20,2023(www.justkannada.in):  ಕೋಲಾರ ಬಿಟ್ಟು ವರುಣಾದಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ಧರಾಮಯ್ಯಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದು ಈ ಹಿನ್ನೆಲೆ ತಂದೆಗಾಗಿ ಕ್ಷೇತ್ರವನ್ನ ತ್ಯಾಗ ಮಾಡಲು ಶಾಸಕ ಯತೀಂದ್ರ ಸಿದ್ಧರಾಮಯ್ಯ ಮುಂದಾಗಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಅಪ್ಪ ವರುಣಾಗೆ ಬಂದ್ರೆ ನಾನು ಸ್ಪರ್ಧಿಸಲ್ಲ. ಸಿದ್ಧರಾಮಯ್ಯ ಅವರ ಪರ ಪ್ರಚಾರ ಮಾಡುತ್ತೇನೆ. ಸರ್ವೇಯಲ್ಲಿ ನೆಗೆಟಿವ್ ಫಲಿತಾಂಶ ಬಂದಿಲ್ಲ ನಾನು ಎರಡು ಬಾರಿ ಸರ್ವೇ ಮಾಡಿಸಿದ್ದೇನೆ. ಸರ್ವೇಯಲ್ಲಿ ತಂದೆ ಪರ ಫಲಿತಾಂಶ ಬಂದಿದೆ ಎಂದು ತಿಳಿಸಿದರು.

Key words: siddaramaiah-Varuna- not –contest-MLA- Yatindra Siddaramaiah.