ಸಿದ್ಧರಾಮಯ್ಯರನ್ನ ಟಾರ್ಗೆಟ್ ಮಾಡ್ತಿದ್ದಾರೆಂಬುದು ಸುಳ್ಳು- ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್…

Promotion

ಉಡುಪಿ,ಫೆಬ್ರವರಿ,27,2021(www.justkannada.in):  ಮೈಸೂರು ಮೇಯರ್ ಚುನಾವಣೆಯಿಂದಾಗಿ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.jk

ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿರುವ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯರನ್ನ ಟಾರ್ಗೆಟ್ ಮಾಡ್ತಿದ್ದಾರೆಂಬುದು ಸುಳ್ಳು. ಯಾರೂ ಕೂಡ ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ಮೊದಲು ಜೆಡಿಎಸ್ ನವರೇ  ನಮಗೆ ಮೇಯರ್ ಸ್ಥಾನ ನೀಡಲು ಒಪ್ಪಿದ್ದರು. ಆದರೆ ಕೊನೆ ಕ್ಷಣದಲ್ಲಿ ಮೇಯರ್ ಅಭ್ಯರ್ಥಿ ಹಾಕಿದರು. ನಾವು ನಮ್ಮ ಪಕ್ಷದಲ್ಲಿ ಅಧಿಕಾರದಲ್ಲಿರಲು, ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡಿದವು. ಆದರೇ ಸ್ಥಳೀಯ ನಾಯಕರೇ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

Siddaramaiah- target is –lie- KPCC President -DK Shivakumar.
ಕೃಪೆ: internet

ನಮ್ಮ ನಾಯಕರ ಬಗ್ಗೆ ಯಾರೂ ಕೂಡ ಅವಹೇಳನಕಾರಿ ಹೇಳಿಕೆ ನೀಡುವಂತಿಲ್ಲ. ಈ ಬಗ್ಗೆ ನಮ್ಮ ಪಕ್ಷದ ನಿಲುವು ಸ್ಪಷ್ಟ. ತನ್ವೀರ್ ಸೇಠ್ ಏನು ಹೇಳಿದ್ದಾರೋ ಗೊತ್ತಿಲ್ಲ. ಸೋಮವಾರ ಬರಲು ತನ್ವೀರ್ ಸೇಠ್ ಗೆ ಸೂಚಿಸಿದ್ದೇನೆ. ಮೇಯರ್ ಚುನಾವಣೆ ಕುರಿತು ವರದಿ ಪಡೆಯಲಿದ್ದೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Siddaramaiah- target is –lie- KPCC President -DK Shivakumar.