ಈ ಬಾರಿ ಕೋಲಾರದಲ್ಲಿ ಸಿದ್ಧರಾಮಯ್ಯ ಸೋಲಿಸುವುದು ಖಚಿತ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

Promotion

ಹುಬ್ಬಳ್ಳಿ,ಜನವರಿ,21,2023(www.justkannada.in): ಈ ಬಾರಿ ಕೋಲಾರದಲ್ಲೂ ಸಿದ್ಧರಾಮಯ್ಯ ಸೋಲಲಿದ್ದಾರೆ. 100 ಪರ್ಸೆಂಟ್ ಸಿದ್ಧರಾಮಯ್ಯರನ್ನ ಮನೆಗೆ ಕಳಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನುಡಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಪ್ರಹ್ಲಾದ್ ಜೋಶಿ, 13 ಬಜೆಟ್ ಮಂಡಿಸಿದವರಿಗೆ ಒಂದು ಕ್ಷೇತ್ರ ಹುಡುಕುವ ಯೋಗ್ಯತೆ ಇಲ್ಲ. ಕೋಲಾರದಲ್ಲಿ ಸ್ಪರ್ಧಿಸಬೇಕೋ ಬೇಡವೋ ಅನ್ನೋ ಅನುಮಾನವಿದೆ.  ಮುನಿಯಪ್ಪ ಬನ್ನಿ ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ.  ಈ ಬಾರಿ ಸಿದ್ಧರಾಮಯ್ಯರನ್ನ ಮನೆಗೆ ಕಳಿಸುತ್ತೇವೆ.   ಸಿದ್ಧರಾಮಯ್ಯ ಬಾದಾಮಿಯಲ್ಲಿ ಕೆಲಸ ಮಾಡಿಲ್ಲ ಹಾಗಾಗಿ ಕೋಲಾರಕ್ಕೆ ಹೋಗಿದ್ದಾರೆ. ನಾವು ಅಚ್ಚರಿ ಅಭ್ಯರ್ಥಿ  ಹಾಕಲ್ಲ. ಅಲ್ಲಿರುವ ಅಭ್ಯರ್ಥಿಯನ್ನೇ ಹಾಕುತ್ತೇವೆ ಎಂದು ಹೇಳಿದರು.

ಸಿದ್ಧರಾಮಯ್ಯ ಬಾದಾಮಿಯಲ್ಲಿ ಸೋಲಿನ ಭಯದಿಂದ ಕೋಲಾರದಲ್ಲಿ ಸ್ಪರ್ಧಿಸುತ್ತಿದ್ದಾರೆ.  ಆದರೇ ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಲಿದ್ದಾರೆ ನನಗೂ ದೆಹಲಿ ದೂರ ಆದರೂ ಜನರ ಸಂಪರ್ಕದಲ್ಲಿದ್ದೇನೆ ಕಲಬುರ್ಗಿ ಯಾದಗಿರಿ ಕಾರ್ಯಕ್ರಮ ನೋಡಿ ಕಾಂಗ್ರೆಸ್ ನವರು ಬೆದರಿದ್ದಾರೆ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

Key words: Siddaramaiah – sure -defeat – Kolar-  Union Minister -Prahlad Joshi,