ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ಧರಾಮಯ್ಯ ನೀಡಿರುವ ರಾಜೀನಾಮೆ ತಿರಸ್ಕರಿಸುವಂತೆ ಒತ್ತಾಯ: ಮೈಸೂರಿನಲ್ಲಿ ಪತ್ರ ಚಳುವಳಿ…

Promotion

ಮೈಸೂರು,ಡಿ,16,2019(www.justkannada.in): ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿರುವ ರಾಜೀನಾಮೆ ತಿರಸ್ಕರಿಸುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಪತ್ರ ಚಳುವಳಿ ನಡೆಯಿತು.

ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಕರ್ನಾಟಕ ರಾಜ್ಯ ಹಿಂದೂಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ದಲಿತ ಸಂಘಟನೆ ಒಕ್ಕೂಟದ ವತಿಯಿಂದ ಪತ್ರ ಚಳುವಳಿ ನಡೆಯಿತು.  ಕರ್ನಾಟಕ ರಾಜ್ಯ ಹಿಂದೂಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್ ಶಿವರಾಮ್ ನೇತೃತ್ವದಲ್ಲಿ  ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ಧರಾಮಯ್ಯ ನೀಡಿರುವ ರಾಜೀನಾಮೆ ತಿರಸ್ಕರಿಸುವಂತೆ ಒತ್ತಾಯಿಸಿ ಪತ್ರ ಚಳುವಳಿ ನಡೆಯಿತು.

ಪ್ರಜಾಪ್ರಭುತ್ವದ ಉಳಿವಿಗಾಗಿ ಸಿದ್ದರಾಮಯ್ಯ ಪ್ರಸ್ತುತ ರಾಜಕೀಯದಲ್ಲಿ ಮುಂಚೂಣಿಯಲ್ಲಿರಬೇಕು. ಸಿದ್ದರಾಮಯ್ಯ ಸಾಮಾಜಿಕ ನ್ಯಾಯ, ಸಾಮಾಜಿಕ ಬದ್ದತೆ ಸಮ ಸಮಾಜದ ಆಶಯಗಳನ್ನ ಹೊಂದಿರುವ ವ್ಯಕ್ತಿ. ಇಂತವರು ಸದಾ ರಾಜಕಾರಣದಲ್ಲಿ ಸಕ್ರೀಯರಾಗಿರಬೇಕು‌. ಆದ್ದರಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಸಿದ್ದರಾಮಯ್ಯ ರಾಜೀನಾಮೆಯನ್ನು ಅಂಗೀಕರೀಸಬಾರದು ಎಂದು ಕೆ.ಎಸ್ ಶಿವರಾಂ ಒತ್ತಾಯಿಸಿದರು.

key words: Siddaramaiah -resigns – Opposition Leader-Letter Movement – Mysore.