ಹಿಂದೂ ಧರ್ಮದ ಬಗ್ಗೆ ಸಿದ್ಧರಾಮಯ್ಯ, ರಾಹುಲ್ ಗಾಂಧಿಗೆ ನಂಬಿಕೆ ಇಲ್ಲ-  ಸಿಎಂ ಬೊಮ್ಮಾಯಿ ವಾಗ್ದಾಳಿ.

Promotion

ಬೆಳಗಾವಿ,ನವೆಂಬರ್,9,2022(www.justkannada.in): ರಾಹುಲ್ ಗಾಂಧಿ ಮತ್ತು ಸಿದ‍್ಧರಾಮಯ್ಯಗೆ  ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲ. ಎಲೆಕ್ಷನ್ ಬಂದಾಗ ದೇವಸ್ಥಾನಕ್ಕೆ ಹೋಗುತ್ತಾರೆ . ಸಿದ್ಧರಾಮಯ್ಯ ಮಾಂಸ ತಿಂದು ದೇಗುಲಕ್ಕೆ ಹೋಗುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಯಿ ವಾಗ್ದಾಳಿ ನಡೆಸಿದರು.

ಬೆಳಗಾವಿ ರಾಯಭಾಗದಲ್ಲಿ  ಇಂದು ನಡೆದ ಬಿಜೆಪಿ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,   ರಾಹುಲ್ ಗಾಂಧಿ ಭಾರ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ . ಭಾರತ ಈಗಾಗಲೇ ಒಂದಾಗಿದೆ. ಮತ್ತೆ ಯಾತ್ರೆ ಯಾಕೆ..? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಧರ್ಮ ಒಡೆದರು.  ನಾನು ಸಿಎಂ ಆದ ತಕ್ಷಣ ರೈತರಿಗಾಗಿ  ಯೋಜನೆ ಜಾರಿ ಮಾಡಿದೆ.  ಬಿಜೆಪಿ ಅಧಿಕಾರಾವಧಿಯಲ್ಲಿ ಎಲ್ಲಾ ವರ್ಗದವರಿಗೆ ಅವಕಾಶ ನೀಡಲಾಗುತ್ತಿದೆ ಎಂದರು.

ಹಿಂದೂ ಧರ್ಮದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತೀರಾ. ಈ ವಿಚಾರದಲ್ಲಿ ಕಾಂಗ್ರೆಸ್ ಮೌನವಾಗಿದೆ. ಈಗ ಕಾಂಗ್ರೆಸ್ ಗೆ ಕೆಟ್ಟ ಕಾಲ ಬಂದಿದೆ.   ಸ್ವಾರ್ಥಕ್ಕಾಗಿ ಅಧಿಕಾರ ಬಳಸಿಕೊಳ್ಳುವುದು ಕಾಂಗ್ರೆಸ್ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದರು.

Key words: Siddaramaiah – Rahul Gandhi  – Hinduism-CM Bommai