2023ರೊಳಗೆ ಸಿದ್ಧರಾಮಯ್ಯರನ್ನ ಕಾಂಗ್ರೆಸ್ ನಿಂದ ಹೊರ ಹಾಕುತ್ತಾರೆ- ಸಚಿವ ಮುನಿರತ್ನ.

Promotion

ಬೆಂಗಳೂರು,ಮೇ,5,2022(www.justkannada.in): ಕಾಂಗ್ರೆಸ್ ನಿಂದ ಸಿದ್ಧರಾಮಯ್ಯರನ್ನ ಹೊರಹಾಕಲು ಸಂಚು ನಡೆಸಲಾಗುತ್ತಿದೆ. 2023ರೊಳಗೆ ಸಿದ್ಧರಾಮಯ್ಯರನ್ನ ಕಾಂಗ್ರೆಸ್ ನಿಂದ ಹೊರ ಹಾಕುತ್ತಾರೆ ಎಂದು ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಭವಿಷ್ಯ ನುಡಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಮುನಿರತ್ನ,  ಅಂದು ರಾಮಕೃಷ್ಣ ಹೆಗಡೆಯನ್ನ ಹೊರಹಾಕಿದರು. ಸಿಎಂ ಇಬ್ರಾಹಿಂರನ್ನ ಹೊರ ಹಾಕಿದರು. ಈಗ ಸಿದ್ಧರಾಮಯ್ಯರನ್ನ ಕಾಂಗ್ರೆಸ್ ನಿಂದ ಹೊರಹಾಕಲು ಯತ್ನ ನಡೆಸಲಾಗುತ್ತಿದೆ. 2023ರೊಳಗೆ ಹೊರ ಹಾಕುತ್ತಾರೆ. ಈಗಾಗಲೇ ಅದಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ ಎಂದು ನುಡಿದರು.

ಪಿಎಸ್ ಐ ನೇಮಕ ಅಕ್ರಮ ಪ್ರಕರಣದ ಬಗ್ಗೆ ಕಾಂಗ್ರೆಸ್ ನಿರಂತರ ಆರೋಪ‌ ಮಾಡುತ್ತಿದೆ. ಯಾವುದೇ ಆಧಾರವಿಲ್ಲದೆ ಆರೋಪ ಮಾಡುತ್ತಿದ್ದಾರೆ. ಆಧಾರಗಳಿಲ್ಲದೆ ಆರೋಪ ಮಾಡೋದು ತಪ್ಪು. ಇದನ್ನ ದೇವರು ಮೆಚ್ಚಲ್ಲ. ಅಶ್ವತ್ಥ ನಾರಾಯಣ್ ಗೂ ಇದಕ್ಕೂ ಸಂಬಂಧವಿಲ್ಲ. ಸಿಐಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಯಾರು ಇನ್ವಾಲ್ವ್ ಇದ್ದಾರೆ. ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ತನಿಖೆ ಮಾಡುವಂತೆ ಸರ್ಕಾರವೇ ಹೇಳಿದೆ. ಆದರೂ ಸಹ ಸಂಬಂಧ ಕಲ್ಪಿಸುವ ಕೆಲಸ ನಡೆದಿದೆ. ಊಹಾಪೋಹದ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಗೆ ಸಚಿವ ಮುನಿರತ್ನ ಟಾಂಗ್ ನೀಡಿದರು.

Key words: Siddaramaiah-out-Congress – 2023-Minister Munirathna.