ಜನರ ಧ್ವನಿ ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ- ಸರ್ಕಾರದ ವಿರುದ್ದ ವಾಗ್ದಾಳಿ: ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಸಿದ್ಧರಾಮಯ್ಯ…

kannada t-shirts

ಬೆಂಗಳೂರು,ಡಿ,20,2019(www.justkannada.in):  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿನ್ನೆ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ  ನಡೆದ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ನಿನ್ನೆ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾದ ಪ್ರಕರಣ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ ಹೊರ ಹಾಕಿದರು.  ಇದೇ ವೇಳೆ ನಿನ್ನೆ ಮಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದು ಮತ್ತು ಫೈರಿಂಗ್ ಮಾಡಿದ್ದ ವಿಡಿಯೋವನ್ನ ಬಿಡುಗಡೆ ಮಾಡಿದರು.

ನಿನ್ನೆ ಮಂಗಳೂರಿನಲ್ಲಿ ಅಹಿಕತರ, ಅಮಾನವೀಯ ಘಟನೆ ನಡೆದಿದೆ. ಸಿಎಎ ವಿರುದ್ದ ಎಲ್ಲೆಡೆ ಜಾತ್ಯಾತೀತವಾಗಿ ಹೋರಾಟ ಮಾಡುತ್ತಿದ್ದಾರೆ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಧರಣಿ ಅಗತ್ಯ. ರಾಜ್ಯ ಸರ್ಕಾರ ಜನರ ಧ್ವನಿ ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆ ಹತ್ತಿಕ್ಕಲು ಸೆಕ್ಷನ್ 144 ಅನ್ನು ಅನಗತ್ಯವಾಗಿ ವಿಧಿಸಲಾಗಿದೆ. ಇದು ಸಂವಿಧಾನಕ್ಕೆ ವಿರುದ್ದವಾದ್ದದ್ದು. ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಘೋಷಿಸಿದಂತಿದೆ. ಹಿಟ್ಲರ್ ಆಡಳಿತ ನೆನಪಿಸುವಂತಿದೆ.  ನನ್ನ ಐದು ವರ್ಷದ ಅವಧಿಯಲ್ಲಿ ಗೋಲಿಬಾರ್ ನಡೆದಿರಲಿಲ್ಲ. ಸರ್ಕಾರ ಜನರ ಧ್ವನಿ ಅಡಗಿಸಲು ಯತ್ನಿಸಿದೆ. ಇದು ಸರಿಯಲ್ಲ. ನಿನ್ನೆ ನಡೆದ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಒತ್ತಾಯಿಸಿದರು.

summary…

section 144 has been imposed unnecessarily.

This was done intentionally to curb freedom of speech and expression

There was no situation to do so. SC has said there must be a prior situation for 144. The govt assumed and imposed

It is undemocratic and unconstitutional
Reminds us of Hitler’s regime.

Looks like the police themselves instigated the violence in Mangaluru
Tear gas, rubber bullets and water canon and lathicharge are the options. But they didn’t do anything. As a last resort shooting is required, here there was no such necessity.
Police have been seen dragging ppl from buses, barge into hospital ICU and beat
One hand, Yediyurappa says don’t use lathi. I’ve instructed police. But despite this police have killed by firing
Have the police not paid here to CM or Yediyurappa is lying
He is the weakest CM. But I don’t think firing can happen without informing the govt.
The intention is to cause probs between religions and gain political mileage.
Suresh angadi, union minister gives instructions for shoot at sight

Key words: Siddaramaiah- mangalore-  Anti-citizenship Amendment Act-section 144- imposed -unnecessarily.

 

website developers in mysore