ಸಿದ್ಧರಾಮಯ್ಯಗೆ ನನ್ನ ಮೇಲೆ ಪ್ರೀತಿ ಇದೆ- ಜೆಡಿಎಸ್ ಬಾವುಟ ಹಿಡಿದಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್….

Promotion

ಬೆಂಗಳೂರು,ಅ,28,2019(www.justkannada.in):ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇದೆ. ನನ್ನ ಬಗ್ಗೆ ಅವರು ಪ್ರೀತಿಯಿಂದ ಮಾತನಾಡಿರಬಹದು ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ಡಿಕೆ ಶಿವಕುಮಾರ್ ಜೆಡಿಎಸ್ ಬಾವುಟ ಹಿಡಿದುಕೊಳ್ಳಬಾರದಿತ್ತು ಎಂದು ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದ್ದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್,  ಸಿದ್ಧರಾಮಯ್ಯ ನನ್ನ ಬಗ್ಗೆ ಹಾಗೆ ಮಾತನಾಡಲು ಸಾಧ್ಯವಿಲ್ಲ. ನನ್ನ ಮೇಲೆ ಅವರಿಗೆ ಪ್ರೀತಿ ಇದೆ. ಆದರೆ ಸಿದ್ಧರಾಮಯ್ಯರನ್ನ ಯಾರೋ ದಾರಿ ತಪ್ಪಿಸುತ್ತಿದ್ದಾರೆ. ಸಿದ್ಧರಾಮಯ್ಯ ಹಿರಿಯರು.  ಅವರು ನಮಗೆ ಸಲಹೆ ನೀಡುತ್ತಾರೆ ಎಂದು ನುಡಿದರು.

ಹಾಗೆಯೇ ಮೆರವಣಿಗೆ ವೇಳೆ ಜೆಡಿಎಸ್ ಬಾವುಟ ಹಿಡಿದುಕೊಂಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್,  ಸ್ವಾಗತದ ವೇಳೆ ನನಗೆ ಎಲ್ಲಾ ರೀತಿಯ ಬಾವುಟ ಕೊಟ್ಟಿದ್ದಾರೆ. ಜನರ ಮಧ್ಯೆ ಕನ್ನಡ ಬಾವುಟ, ಕಾಂಗ್ರೆಸ್ ಬಾವುಟ ಇತ್ತು. ಈ ವೇಳೆಯೂ ಯಾರೋ ಜೆಡಿಎಸ್ ಬಾವುಟ ಕೊಟ್ಟಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಾನು ಹುಟ್ಟು ಕಾಂಗ್ರೆಸ್ಸಿಗ ಎಂದು ಸ್ಪಷ್ಟನೆ ನೀಡಿದರು.

ನಾನು ಉತ್ತರ ಕರ್ನಾಟಕ ಪ್ರವೇಶ ಕೈಗೊಳ್ಳುತ್ತೇನೆ. ಅದಕ್ಕೂ ಮೊದಲು ನಾನು ನನ್ನ ವಕೀಲರನ್ನು ಭೇಟಿ ಮಾಡಬೇಕಿದೆ. ಇದಾದ ಬಳಿಕ ಮುಂದಿನ ಕಾರ್ಯಕ್ರಮ ಕುರಿತು ಮಾಹಿತಿ ನೀಡುತ್ತೇನೆ ಎಂದರು.

Key words: Siddaramaiah – love – Former minister- DK Sivakumar – clarified – JDS – flag.