ಸಿದ್ದರಾಮಯ್ಯ ಗೆ ತಡವಾಗಿಯಾದ್ರೂ ಜ್ಞಾನೋದಯವಾಗಿದೆ- ಶಾಸಕ ಸಾ.ರಾ.ಮಹೇಶ್ ಚಾಟಿ…

Promotion

ಮೈಸೂರು,ನವೆಂಬರ್,10,2020(www.justkannada.in): ಜೆಡಿಎಸ್ ಪಕ್ಷದ  ಅಸ್ತಿತ್ವ ಕುಸಿದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂಬುದು ತಡವಾಗಿಯಾದರೂ ಮಾನ್ಯ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್  ಮಾತಿನ ಚಾಟಿ ಬೀಸಿದ್ದಾರೆ.kannada-journalist-media-fourth-estate-under-loss

ಈ ಕುರಿತು ಮಾತನಾಡಿದ ಮಾಜಿ ಸಚಿವ ಸಾ.ರಾ ಮಹೇಶ್, ಉಪಚುನಾವಣೆ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ’ ‘ಜೆಡಿಎಸ್ ತನ್ನ ಮತಗಳನ್ನು  ಉಳಿಸಿ ಕೊಂಡಿದ್ದರೆ, ಬಿಜೆಪಿ ಸುಲಭವಾಗಿ ಗೆಲ್ಲುತ್ತಿರಲಿಲ್ಲ ‘ಎನ್ನುವ ಮೂಲಕ ಜಾತ್ಯತೀತ ಜನತಾದಳ ಪಕ್ಷದ ಅಸ್ತಿತ್ವ ಸಡಿಲವಾದರೆ ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಕೂಡ ಉಪಚುನಾವಣೆಗಳಲ್ಲಿ ಹೀನಾಯವಾಗಿ ಸೋತಿದೆ. ನಮ್ಮ ಪಕ್ಷದ ಮೇಲೆ   ಗೂಬೆ  ಕೂರಿಸುವ ಮೊದಲು  ಕಾಂಗ್ರೆಸ್ ನ ಬುಡ  ಅಲ್ಲಾಡುತ್ತಿರುವುದು ಸಿದ್ದರಾಮಯ್ಯ ಅವರಿಗೆ ಸ್ವಯಂವೇದ್ಯವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕಾಂಗ್ರೆಸ್ ಹೀನಾಯ ಸೋಲಿಗೆ ಆ ಪಕ್ಷದ ಒಳಗಿನ ನಾಯಕರ ನಡುವಣ ಒಳಬೇಗುದಿ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಮೈಸೂರಿನ ಸಂಸದರು ಹೇಳುವಂತೆ  ಸಿದ್ದು ಅವರು ಬಿಜೆಪಿಗೆ  ಬೆಂಬಲಿಸಿರುವ ಗುಮಾನಿ  ಕೆಲ ಕಾಂಗ್ರೆಸ್ ನಾಯಕರಿಗೂ ಕಾಡುತ್ತಿದೆ ಎಂದು ಸಾರಾ ಮಹೇಶ್ ಲೇವಡಿ ಮಾಡಿದ್ದಾರೆ.

Key words:  Siddaramaiah –late- enlightenment- MLA-sa.ra Mahesh