ಅರ್ಕಾವತಿ ಪ್ರಕರಣ ಕೈಗೆತ್ತಿಕೊಂಡರೇ ಸಿದ‍್ಧರಾಮಯ್ಯ ಜೈಲುಗೆ ಹೋಗುತ್ತಾರೆ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್.

Promotion

ತುಮಕೂರು,ಮೇ,7,2022(www.justkannada.in):  ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣವನ್ನ ಕೈಗೆತ್ತಿಕೊಂಡರೇ ಸಿದ‍್ಧರಾಮಯ್ಯ ಜೈಲಿಗೆ ಹೋಗ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದಾರೆ.

ಇಂದು ಮಾತನಾಡಿದ ನಳೀನ್ ಕುಮಾರ್ ಕಟೀಲ್, ಪಿಎಸ್ ಐ  ಪರೀಕ್ಷೆ ಅಕ್ರಮದ ಬಗ್ಗೆ ಪೂರ್ಣವಾಗಿ ನಿಷ್ಪಕ್ಷಪಾತವಾಗಿ ತನಿಖೆ ಮಾಡ್ತಾ ಇದೆ. ಹೀಗಾಗಿ ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಅಭಿನಂದನೆ ಸಲ್ಲಿಸುತ್ತೇನೆ.   ಜಾರ್ಜ್ ಕೋರ್ಟ್ ಹೇಳಿದ ಮೇಲೆ ರಾಜೀನಾಮೆ ಕೊಟ್ಟರು. ತಮ್ಮ ಸರ್ಕಾರಕ್ಕೆ ಧೈರ್ಯ ಇದೆ. ಛಾತಿ ಇದೆ. ನಮ್ಮ ಮುಖ್ಯಮಂತ್ರಿಗಳಿಗೆ ಶಕ್ತಿ, ತಾಕತ್ತು ಇದೆ. ಗೃಹ ಸಚಿವರಿಗೆ ತಾಕತ್ತಿದೆ. ಪರೀಕ್ಷೆ ಅಕ್ರಮ ಮಾಡಿದವರನ್ನು ಒಳಗೆ ಹಾಕುತ್ತೇವೆ ಎಂದು ಹೇಳಿದರು.

ಹಾಗೆಯೇ ಕಾಂಗ್ರೆಸ್ ವಿರುದ‍್ಧ ಟೀಕಾ ಪ್ರಹಾರ ಮುಂದಿವರೆಸಿದ ನಳೀನ್ ಕುಮಾರ್ ಕಟೀಲ್, ಕರ್ನಾಟಕದಲ್ಲಿ ಕಾಂಗ್ರೆಸ್ ಆಕ್ಸಿಜನ್ ಮೂಲಕ ಉಸಿರಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಹೆಚ್ಚಿನ ಕೋಮು ಗಲಭೆಗಳಾಗಿವೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಡಿಕೆಶಿ ಜೈಲಿಗೆ ಹೋಗಿದ್ಯಾಕೆ? ದೆಹಲಿಯ ತಿಹಾರ ಜೈಲಿಗೆ ದೇಶದ ಇತಿಹಾಸ ಓದಲು ಹೋಗಿದ್ರಾ?  ಎಂದು ಲೇವಡಿ ಮಾಡಿದರು.

Key words: Siddaramaiah- jail – Arkavathi case-BJP President- Nalin Kumar Katil.