ಸಿದ್ಧರಾಮಯ್ಯ  ಆರ್ ಎಸ್ ಎಸ್ ಕಾರ್ಯಕರ್ತರ ಪಾದದ ಧೂಳಿಗೂ ಸಮರಲ್ಲ- ಕೆ.ಎಸ್ ಈಶ್ವರಪ್ಪ ವಾಗ್ದಾಳಿ.

Promotion

ಶಿವಮೊಗ್ಗ,ಜುಲೈ,30,2022(www.justkannada.in):  ಆರ್ ಎಸ್ ಎಸ್ ಬಗ್ಗೆ ಟೀಕಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯನಂತ ಸಿಎಂ ಆಗಿದ್ದಕ್ಕೆ ಬೇಸರವಾಗುತ್ತಿದೆ . ಆರ್ ಎಸ್ ಎಸ್ ಬಗ್ಗೆ ರಾಜಕೀಯ ತೆವಲಿಗಾಗಿ ಹೇಳಿಕೆಗಳನ್ನ ನೀಡಬೇಡಿ. ಸಿದ್ಧರಾಮಯ್ಯನವರು  ಆರ್ ಎಸ್ ಎಸ್ ಕ್ಷಮೆಯಾಚಿಸಬೇಕು. ಸಿದ್ದರಾಮಯ್ಯ ತೆವಲು ತೀರಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು. ಜೊತೆಗೆ ಆರ್ ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಬೇಕು. ಆರ್ ಎಸ್‌ಎಸ್ ಶಾಖೆಗೆ  ಎರಡು ದಿನ ಬನ್ನಿ ಎಂದು ಹೇಳಿದರು.

ದೇಶದ್ರೋಹಿ ಸಂಘಟನೆಗಳ ನಿಷೇಧಕ್ಕೆ ನಾವು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ.  ಎಬಿವಿಪಿ ಮೇಲೆ ಲಾಠಿಚಾರ್ಜ್ ಖಂಡಿಸುತ್ತೇನೆ. ಲಾಠಿಚಾರ್ಜ್ ಮಾಡುವುದನ್ನ ನಾನು ಒಪ್ಪುವುದಿಲ್ಲ ಎಂದು ಕೆ.ಎಸ್ ಈಶ್ವರಪ್ಪ ಆಕ್ಷೇಪಿಸಿದರು.

ನಿಮ್ಮ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಗುಂಪು, ಡಿಕೆಶಿ ಗುಂಪು ಇದೆ. ಆದರೆ ಆರ್ ಎಸ್ ಎಸ್ ನಲ್ಲಿ ಗುಂಪುಗಳಿಲ್ಲ. ಸಿದ್ದರಾಮಯ್ಯ ಕುಡುಕರ ರೀತಿ ಮಾತನಾಡುವುದು ಸರಿಯಲ್ಲ ಎಂದು ಈಶ್ವರಪ್ಪ ಕಿಡಿಕಾರಿದರು.

Key words: Siddaramaiah –  feet – RSS –workers-KS Eshwarappa