ಪಾದಯಾತ್ರೆ ವಾಪಸ್ ವಿಚಾರ: ಡಿಕೆಶಿ-ಸಿದ್ಧರಾಮಯ್ಯಗೆ ಕುಟುಕಿದ ಸಚಿವ ಕೆ.ಎಸ್ ಈಶ್ವರಪ್ಪ.

Promotion

ಶಿವಮೊಗ್ಗ,ಜನವರಿ,13,2022(www.justkannada.in): ಮೇಕೆದಾಟು ಪಾದಯಾತ್ರೆ ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಸಿಎಂ ಕುರ್ಚಿಗಾಗಿ ಆಡಿದ ನಾಟಕ.  ಕೋರ್ಟ್ ಇಬ್ಬರನ್ನೂ ಬಡಿದೆಬ್ಬಿಸಿದೆ. ಕೋರ್ಟ್ ಭಯಕ್ಕೆ ಪಾದಯಾತ್ರೆ ನಿಲ್ಲಿಸಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪಾದಯಾತ್ರೆ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರನ್ನ ಕುಟುಕಿದ ಸಚಿವ ಕೆ.ಎಸ್ ಈಶ್ವರಪ್ಪ,  ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿದ್ರೆಲ್ಲ. ಕೋರ್ಟ್ ಏನು ಮಾಡುತ್ತೆ ಅಂತಾ ಗೊತ್ತು. ಕೋರ್ಟ್ ಭಯಕ್ಕೆ ಪಾದಯಾತ್ರೆ ವಾಪಸ್ ಪಡೆದಿದ್ದಾರೆ.  ನಮ್ಮಿಂದ ಕೊರೋನಾ ಹರಡಿಲ್ಲ ಅಂತಾರೆ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂತಾರೆ ಎಂದು ಟಾಂಗ್ ನೀಡಿದರು.

ಕೊರೋನಾ ಹಬ್ಬಲು ಪಾದಯಾತ್ರೆ ಕಾರಣ.  ಜಿಲ್ಲೆಗಳಲ್ಲು ಕೊರೋನಾ ಹಬ್ಬಿಸಿದ್ದಾರೆ. ರಾಜಕೀಯ ಮಾಡಲು ನಾನೂ ತಯಾರಿದ್ದೇನೆ ಕೊರೊನಾ ಮುಗಿದ ಮೇಲೆ ರಾಜಕೀಯ ಮಾಡಿ.  ರಾಜಕೀಯದಿಂದ ದೇಶ ರಾಜ್ಯ ಕಳೆದುಕೊಂಡಿದ್ದೀರಿ. ಒಳ್ಳೇ ರಾಜಕಾರಣ ಮಾಡಿ ನಾವು ಗಳಿಸಿಕೊಂಡಿದ್ದೇವೆ. ಪ್ರಮಾಣವಾಗಿ ಹೇಳುತ್ತೇನೆ ಡಿಕೆಶಿ ಸಿದ್ಧು ಸಿಎಂ ಆಗಲ್ಲ.  ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.

Key words: siddaramaiah-DK Shivakumar-ks Eshwarappa