ಸಿದ್ಧರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ- ಶಾಸಕ ಯತೀಂದ್ರ ಸಿದ್ಧರಾಮಯ್ಯ.

Promotion

ಮೈಸೂರು,ಮಾರ್ಚ್,24,2023(www.justkannada.in): ಸಿದ್ಧರಾಮಯ್ಯ  ವರುಣಾ ಮತ್ತು ಕೋಲಾರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು  ಶಾಸಕ ಯತೀಂದ್ರ ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ಧರಾಮಯ್ಯ, ವರಿಷ್ಠರು ಕೋಲಾರ ಬೇಡ ವರುಣಾದಲ್ಲಿ ಸ್ಪರ್ಧಿಸಿ ಎಂದಿದ್ದರು. ಕೋಲಾರದಿಂದ ಹಿಂದೆ ಸರಿದರೆ ಹಿನ್ನೆಡೆ ಅಗುತ್ತೆ ಎಂದಿದ್ದಾರೆ ಇವತ್ತಿನ ಸ್ಥಿತಿಯಲ್ಲಿ ಸಿದ್ಧರಾಮಯ್ಯ ಕೋಲಾರ ಬಿಡುವಂತಿಲ್ಲ. ಹೈಕಮಾಂಡ್ ಸೂಚನೆಯಂತೆ ವರುಣಾ ಕ್ಷೇತ್ರವನ್ನ ಬಿಡಲು ಆಗಲ್ಲ.  ಹೀಗಾಗಿ ಸಿದ‍್ಧರಾಮಯ್ಯ ವರುಣಾ ಕೋಲಾರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ವರುಣದಲ್ಲಿ ಮಾತ್ರ ಸ್ಪರ್ಧಿಸಿ ಅಂತಾ ನಾನು ಮೊದಲೇ ಸಲಹೆ ಕೊಟ್ಟಿದ್ದೆ ಎಂದರು.

ಸಿದ್ಧರಾಮಯ್ಯ ಎಲ್ಲೇ  ಸ್ಪರ್ಧಿಸಿದರೂ ವೈರಿಗಳು ಒಂದಾಗಿ ಸೋಲಿಸಲು ಯತ್ನಿಸುತ್ತಾರೆ. ಸಿದ‍್ಧರಾಮಯ್ಯ ವಿರುದ್ದ ನೀರಿನಂತೆ ಹಣ ಚೆಲ್ಲುತ್ತಾರೆ ಎಂದು ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

Key words: Siddaramaiah – decided – contest – two- constituencies- MLA -Yatindra Siddaramaiah.