ಸಿ‍ದ‍್ಧರಾಮಯ್ಯ ವರುಣ ಅಲ್ಲ ಪಾಕ್ ನಲ್ಲಿ ಸ್ಪರ್ಧಿಸಲಿ- ಸಚಿವ ಆರ್.ಅಶೋಕ್ ವ್ಯಂಗ್ಯ.

Promotion

ಬೆಂಗಳೂರು,ಮಾರ್ಚ್,18,2023(www.justkannada.in): ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೋಲಾರದಿಂದ ಸ್ಪರ್ಧಿಸದಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆಂಬ ಸುದ್ದಿ ಹೊರಬಿದ್ದಬೆನ್ನಲ್ಲೆ ಈ ಬಗ್ಗೆ ಬಿಜೆಪಿ ನಾಯಕರ ಟೀಕಾಪ್ರಹಾರ ಶುರುವಾಗಿದೆ.

ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್, ಸಿದ್ಧರಾಮಯ್ಯ ವರುಣಾ ಅಲ್ಲ ಪಾಕ್ ನಲ್ಲಿ ಸ್ಪರ್ಧಿಸಲಿ. ಅಫ್ಘಾನಿಸ್ತಾನದಲ್ಲಿ, ಬಾಂಗ್ಲಾದಲ್ಲಿ ಸ್ಪರ್ಧಿಸಲಿ.  ಬಹುಶಃ ಆ ದೇಶಗಳಲ್ಲಿ ಸಿದ್ಧರಾಮಯ್ಯ ಗೆಲ್ಲಬಹುದು ಸಿದ್ಧರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲಲ್ಲ.  ಈಗಾಗಲೇ  ಚಾಮುಂಡೇಶ್ವರಿಯಲ್ಲಿ ಸೋತಿದ್ದಾರೆ. ಬಾದಾಮಿಯಿಂದ ಓಡಿ ಹೋಗಿದ್ದಾರೆ. ಮತ್ತೆ ವರುಣಾ ಕಡೆ ಮುಖ ಮಾಡುತ್ತಿದ್ದಾರೆ. ಸಿದ್ದಾರಾಮಯ್ಯ ಬೇರೆ ದೇಶಕ್ಕೆ ಹೋದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.

ವಿಜಯ ಸಂಕಲ್ಪಯಾತ್ರೆ ಮೂಲಕ ಜನಜಾಗೃತಿ ಮಾಡುತ್ತಿದ್ದೇವೆ.  ಬಿಜೆಪಿಯಲ್ಲಿ ಬಹಳಷ್ಟು ರಾಜ್ಯ ಕೇಂದ್ರ ನಾಯಕರಿದ್ದಾರೆ. ಕಾಂಗ್ರೆಸ್ ಗೆ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಬಿಟ್ಟರೆ 3ನೇ ಲೀಡರ್ ಇಲ್ಲ ಕಾಂಗ್ರೆಸ್ ನಾಯಕರು ಟಿಕೆಟ್ ಹಂಚಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಅಧಿಕಾರದ ರುಚಿ ನೋಡಬೇಕೆಂದು ನೋಡಿದ್ದಾರೆ.  ಕಾಂಗ್ರೆಸ್ ಆಳ್ವಿಕೆ ನೋಡಿ ಜನ ಬದಲಾವಣೆ ಬಯಸಿದ್ದಾರೆ ಎಂದರು.

Key words: Siddaramaiah-contest -Pakistan – Varuna- Minister -R. Ashok