ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ: 5 ವರ್ಷದವರೆಗೂ ಸಿದ್ಧರಾಮಯ್ಯ ಸಿಎಂ- ಸಚಿವ ಜಮೀರ್ ಅಹ್ಮದ್ ಖಾನ್

Promotion

ದಾವಣಗೆರೆ,ಅಕ್ಟೋಬರ್ 31,2023(www.justkannada.in): ಎರಡುವರೆ ವರ್ಷದ ಬಳಿಕ ರಾಜ್ಯ ಸಚಿವ ಸಂಪುಟ ಬದಲಾಗಲಿದೆ. ಸಿಎಂ ಕೂಡ ಬದಲಾಗಲಿದ್ದಾರೆ ಎಂಬ ಹೇಳಿಕೆಗಳು ಕೇಳಿ ಬಂದ ಹಿನ್ನೆಲೆ ಈ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ದಾವಣಗೆರೆಯಲ್ಲಿ ಮಾತನಾಡಿರುವ ಅವರು,  ರಾಜ್ಯದಲ್ಲಿ  ಸಿಎಂ ಹುದ್ದೆ ಖಾಲಿ ಇಲ್ಲ. 5 ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿರಲಿದ್ದಾರೆ. ರಮೇಶ್ ಜಾರಕಿಹೊಳಿ ಹಗಲುಗನಸು ಕಾಣುತ್ತಿದ್ದಾರೆ.  ಅಪರೇಷನ್ ಕಮಲ ಅಸಾಧ್ಯ. ಅಪರೇಷನ್ ಕಮಲ ಮಾಡಬೇಕಾದರೇ 56 ಶಾಸಕರನ್ನ ಕರೆದೊಯ್ಯಬೇಕು.  ಅಪರೇಷನ್ ಮಾಡಲು ಸಾಧ್ಯಾನಾ..? ಅಪರೇಷನ್ ಕಮಲ ಎಷ್ಟು ಕಷ್ಟ ಅಂತಾ ರಮೇಶ್ ಜಾರಕಿಹೊಳಿಯನ್ನೇ ಕೇಳಿ ಎಂದು ಟಾಂಗ್ ನೀಡಿದರು.

ಮೈತ್ರಿ ಸರ್ಕಾರಿವಿದ್ದಾಗ 17 ಶಾಸಕರನ್ನ ಕರೆದೊಯ್ಯಲು ರಮೇಶ್ ಜಾರಕಿಹೊಳಿ ಎಷ್ಟು ಸರ್ಕಸ್ ಮಾಡಿದ್ದಾರೆ. ಹೈಕಮಾಂಡ್ ಬಳಿ ಬೇಳೆ ಬೇಯಿಸಿಕೊಳ್ಳಲು ಹೀಗೆ ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಇರುವ ಶಾಸಕರನ್ನ ರಮೇಶ್ ಮೊದಲು ಉಳಿಸಿಕೊಳ್ಳಲಿ. ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಮೊದಲು ಅವರನ್ನ ಉಳಿಸಿಕೊಳ್ಳಲಿ ಎಂದು ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದರು.

Key words: Siddaramaiah -CM – 5 years – Minister -Jameer Ahmed Khan