ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪ  ಶೀಘ್ರ ಗುಣಮುಖರಾಗಲಿ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಾರ್ಥನೆ…

Promotion

ಕಲಬುರಗಿ,ಆ,4,2020(www.justkannada.in):  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೋರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಾರ್ಥಿಸಿದ್ದಾರೆ.jk-logo-justkannada-logo

ಕಲಬುರಗಿಯ ಗಾಣಿಗಾಪುರದಲ್ಲಿ ದತ್ತಾತ್ರೇಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು…

‘ನಮ್ಮ ಶಾಸಕಾಂಗ ಪಕ್ಷದ ನಾಯಕರಿಗೆ ಕೋವಿಡ್ ಸೋಂಕು ತಗುಲಿದೆ ಎಂದು ವಿಷಯ ತಿಳಿಯಿತು. ನಾವೆಲ್ಲರೂ ಈಗ ದೇವರ ಸನ್ನಿದಿಯಲ್ಲಿ ಸೇರಿದ್ದು, ಆ ಭಗವಂತ, ದತ್ತಾತ್ರೇಯ, ಚಾಮುಂಡೇಶ್ವರಿ ತಾಯಿ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ಅವರು ಗುಣಮುಖರಾಗಿ ಮರಳಲಿ ಎಂದು ಪ್ರಾರ್ಥನೆ ಮಾಡುತ್ತೇನೆ.siddaramaiah-bs-yeddyurappa-speedy-cure-kpcc-president-dk-sivakumar

ಅದೇ ರೀತಿ ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರೂ ಕೂಡ ಆದಷ್ಟು ಬೇಗ ಆರೋಗ್ಯವಂತರಾಗಿ ರಾಜ್ಯಕ್ಕೆ ಉತ್ತಮವಾದ ಆಡಳಿತ ನೀಡಿಡಲಿ. ಇಬ್ಬರೂ ನಾಯಕರು ಜನರ ಸಂಕಷ್ಟ ದೂರ ಮಾಡುವಂತಹ ಶಕ್ತಿ ಸಿಗಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ’ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: Siddaramaiah- BS Yeddyurappa – speedy –cure-KPCC President- DK Sivakumar