ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶ್ರೀಗಳನ್ನ ಸ್ಮರಿಸಿ ಜಯಂತ್ಯೋತ್ಸವಕ್ಕೆ ಶುಭಹಾರೈಸಿದ ಪ್ರಧಾನಿ ಮೋದಿ.

Promotion

ಬೆಂಗಳೂರು,ಏಪ್ರಿಲ್,1, 2022(www.justkannada.in): ಇಂದು ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಶ್ರೀಗಳ ಕೊಡುಗೆಯನ್ನ ಪ್ರಧಾನಿ ಮೋದಿ ಸ್ಮರಿಸಿದ್ದಾರೆ.

ಟ್ವೀಟ್ ಮೂಲಕ ಶ್ರೀಗಳನ್ನ ಸ್ಮರಿಸಿದ ಪ್ರಧಾನಿ ಮೋದಿ,  ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಪ್ರಾಮುಖ್ಯ ಹಾಗೂ ಸರಿಸಾಟಿಯಿಲ್ಲದ ಅವರ ಸಾಮುದಾಯಿಕ ಸೇವೆಯಿಂದಾಗಿ ಅವರು ಸದಾ ಸ್ಮರಣೀಯರು. ಅವರ ಕನಸುಗಳನ್ನು ಈಡೇರಿಸಲು ನಾವು ಶ್ರಮಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

Key words: siddaganga shri-jayantyotsava-PM-narendramodi-tweet