ಶ್ರೀ ಕೃಷ್ಣ ಜನ್ಮಾಷ್ಠಮಿ: ಮೈಸೂರಿನ ಇಸ್ಕಾನ್ ದೇವಾಲಯದಲ್ಲಿ ವಿಶೇಷ ಪೂಜೆ: ಭಕ್ತರ ಸಂಖ್ಯೆ ವಿರಳ…

Promotion

ಮೈಸೂರು,ಆ,11,2020(www.justkannada.in):  ಇಂದು ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ಇಸ್ಕಾನ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.jk-logo-justkannada-logo

ಪ್ರತಿವರ್ಷ ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಸಾವಿರಾರು ಭಕ್ತರು ಸೇರುತ್ತಿದ್ದ  ಇಸ್ಕಾನ್ ದೇವಾಲಯದಲ್ಲಿ ಈ ಬಾರಿ ಕೋರೋನಾ ಭೀತಿಯಿಂದಾಗಿ ಭಕ್ತರ ಸಂಖ್ಯೆ ವಿರಳವಾಗಿದೆ. ಪ್ರತಿ ವರ್ಷ ಇಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ವಿಜೃಂಭಣೆಯಿಂದ ನಡೆಯುತ್ತಿತ್ತು.ಆದರೆ ಕೋವಿಡ್ ಭೀತಿಯಿಂದಾಗಿ ಇಸ್ಕಾನ್ ದೇವಾಲಯ ಭಕ್ತರಿಲ್ಲದೆ ಬಣಗುಡುತ್ತಿದೆ.shri-krishna-janmashtami-special-worship-iskcon-temple-mysore

ದೇವಸ್ಥಾನದಲ್ಲಿ ಪ್ರಸಾದ ವಿನಯೋಗಕ್ಕೂ ಬ್ರೇಕ್ ಹಾಕಲಾಗಿದ್ದು, ದೇವಾಲಯಕ್ಕೆ ಬರುವ ಕೆಲ ಭಕ್ತರಿಗೆ ಥರ್ಮಲ್ ಸ್ಕ್ರೀನಿಗ್, ಸ್ಯಾನಿಟೈಜ್ ಸಿಂಪಡಣೆ ಮಾಡಲಾಗುತ್ತಿದೆ. ಇನ್ನು ನಾಳೆ ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ, ಅಭಿಷೇಕ ನಡೆಯಲಿದ್ದು, ನಾಳೆ ಸಂಜೆ ದೇವರ  ದರ್ಶನಕ್ಕೆ ಅವಕಾಶ ನೀಡಲಾಗಿದೆ.

Key words: Shri Krishna Janmashtami- Special worship -ISKCON Temple – Mysore