ವರ್ಚುವಲ್ ಆಗಿ ನಡೆದ ಶ್ರೇಯಾ ಘೋಷಾಲ್ ಬೇಬಿ ಶವರ್ !

Promotion

ಬೆಂಗಳೂರು, ಏಪ್ರಿಲ್ 12, 2021 (www.justkannada.in): ಗಾಯಕಿ ಶ್ರೇಯಾ ಘೋಷಾಲ್ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ತುಂಬು ಗರ್ಭಿಣಿ ಆಗಿರುವ ಶ್ರೇಯಾಗೆ ಸ್ನೇಹಿತರೆಲ್ಲ ಸೇರಿ ವರ್ಚುವಲ್ ಬೇಬಿ ಶವರ್​ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮದ ಕೆಲ ಫೋಟೋಗಳನ್ನು ಶ್ರೇಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಶ್ರೇಯಾ ಘೋಷಾಲ್​ ಅವರ ಬೇಬಿ ಶವರ್​ ಕಾರ್ಯಕ್ರಮದಲ್ಲೂ ಅವರ ಸ್ನೇಹಿತರು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿದ್ದಾರೆ.

ಬಗೆಬಗೆಯ ಅಡುಗೆಗಳನ್ನು ಮಾಡಿ ಶ್ರೇಯಾಗೆ ಕಳಿಸಲಾಗಿದೆ. ಆನ್​ಲೈನ್​ ಮೂಲಕ ವರ್ಚುವಲ್​ ಆಗಿಯೇ ಬೇಬಿ ಶವರ್​ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಈ ವಿಷಯವನ್ನು ಶ್ರೇಯಾ ಘೋಷಾಲ್​ ಈ ವಿಚಾರವನ್ನು ಇನ್​ಸ್ಟಾಗ್ರಾಮ್​ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.