‘ಶೂನ್ಯ’ ಬ್ರ್ಯಾಂಡ್‌ ನ ಬಂಡವಾಳ ಪಾಲುದಾರರಾದ ಶ್ರದ್ಧಾ ಕಪೂರ್

Promotion

ಬೆಂಗಳೂರು,ಫೆಬ್ರವರಿ,18,2021(www.justkannada.in):  ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು’ಶೂನ್ಯ’ ಬ್ರ್ಯಾಂಡ್‌ನ ಬಂಡವಾಳ ಪಾಲುದಾರರಾಗಿದ್ದಾರೆ.

ಹೌದು, ಬೈದ್ಯನಾಥ್ ಸಮೂಹದಡಿ ಕಾರ್ಯನಿರ್ವಹಿಸುತ್ತಿರುವ ನೇಚರ್‌ಎಡ್ಜ್ ಬೆವರೇಜಸ್ ಪ್ರೈ.ಲಿ. ಹೊರತಂದಿರುವ ‘ಶೂನ್ಯ’ ಬ್ರ್ಯಾಂಡ್‌ನ ಬಂಡವಾಳ ಪಾಲುದಾರರಾಗಿದ್ದಾರೆ.

‘ಶೂನ್ಯ ಬ್ರ್ಯಾಂಡ್‌ನಡಿ ಆಯುರ್ವೇದ ಪದ್ಧತಿ ಅನುಸಾರ ಸಂಶೋಧಿಸಲ್ಪಟ್ಟ ಗಿಡಮೂಲಿಕೆಗಳಿಂದ ತಯಾರಿಸಿದ ಶೂನ್ಯ ಗೊ, ಶೂನ್ಯ ಫಿಜ್‌ ಪಾನೀಯ ಜನಪ್ರಿಯವಾಗಿದೆ. 2019ರ ಜನವರಿಯಲ್ಲಿ ಭಾರತೀಯ ಮಾರುಕಟ್ಟೆಗೆ ಇವುಗಳನ್ನು ಪರಿಚಯಿಸಲಾಯಿತು. ಇನ್ನು ಸಿದ್ದೇಶ್ ಶರ್ಮಾ ಅವರು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.