ಮೈಸೂರಿನಲ್ಲಿ ಶೂಟ್ ಔಟ್ ಪ್ರಕರಣ ಸಿಐಡಿಗೆ ಹಸ್ತಾಂತರ…

Promotion

ಮೈಸೂರು,ಮೇ,17,2019(www.justkannada.in):  ಮನಿಡಬ್ಲಿಂಗ್ ಆರೋಪದ ಮೇಲೆ ಮೈಸೂರಿನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣವನ್ನ ಇದೀಗ ಸಿಐಡಿಗೆ ಹಸ್ತಾಂತರಿಸಲಾಗಿದೆ.

ಶೂಟ್ ಔಟ್ ಕೇಸ್ ಸಿಐಡಿ ಗೆ ಹಸ್ತಾಂತರ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇಂದು ಸಂಜೆ ವೇಳೆಗೆ  ಸಿಐಡಿ ತಂಡ ಮೈಸೂರಿಗೆ ಆಗಮಿಸಲಿದ್ದು ಮೈಸೂರಿಗೆ ಬಂದ ನಂತರ ಸಂಪೂರ್ಣ ಪ್ರಕರಣವನ್ನ ತನಿಖೆ ನಡೆಸಲಿದೆ. ಸುಪ್ರೀಂ ಕೋರ್ಟ್ ಗೈಡ್ ಲೈನ್ ಪ್ರಕಾರ ಶೂಟ್ ಔಟ್ ಪ್ರಕರಣವನ್ನ ಸಿಐಡಿ ತನಿಖೆ ನಡೆಸಬೇಕಾಗಿದ್ದು, ಈ ಕಾರಣಕ್ಕಾಗಿ ಸಿಐಡಿ ತನಿಖೆ ಮುಂದುವರೆಯಲಿದೆ.

ಪ್ರಕರಣ ಸಂಬಂಧ ಈಗಾಗಲೇ ಬಾತ್ಮಿದಾರನನ್ನ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈವರೆಗೆ ಯಾರನ್ನೂವಶಕ್ಕೆ ಪಡೆದಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.  ಮೃತ ಸುಕ್ವಿಂದರ್  ಕುಟುಂಬಸ್ಥರು ಇಂದು ಸಂಜೆ ವೇಳೆಗೆ ಪಂಜಾಬ್ ನಿಂದ ಆಗಮಿಸಲಿದ್ದು, ಕುಟುಂಬಸ್ಥರು ಆಗಮಿಸಿದ ನಂತರ ಮರಣೊತ್ತರ ಪರೀಕ್ಷೆ ನಡೆಯಲಿದೆ.

shootout case in Mysore was transferred to the CID..

#mysore #shootoutcase #cirmenews #police #cid