ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್: ರಾಜ್ಯದ ಹಲವೆಡೆ ಎಸಿಬಿ ದಾಳಿ….

ಬೆಂಗಳೂರು/ಕೋಲಾರ,ಫೆಬ್ರವರಿ,2,2021(ww.justkannada.in) ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ  ಎಸಿಬಿ ಶಾಕ್   ನೀಡಿದ್ದು  ಅಕ್ರಮ ಆಸ್ತಿಗಳಿಕೆ ಅರೋಪದ  ಮೇಲೆ ರಾಜ್ಯದ ಹಲವು ಆಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.jk

ರಾಜ್ಯಾದ್ಯಂತ  ಬೆಂಗಳೂರು ನಗರ, ಕೋಲಾರ, ಹುಬ್ಬಳ್ಳಿ ಸೇರಿ ರಾಜ್ಯದ ವಿವಿಧೆಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ  ಪರಿಶೀಲನೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾಂವಿ ಎಂಬವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ  ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಗೋಕುಲ ರಸ್ತೆ, ವಿದ್ಯಾನಗರ, ಕೋಟಿಲಿಂಗೆಶ್ವರ ನಗರದ ಮನೆಗಳಲ್ಲಿ ಮೂರು ಎಸಿಬಿ ತಂಡಗಳು ಪರಿಶೀಲನೆ ನಡೆಸುತ್ತಿವೆ.

ಕೋಲಾರದಲ್ಲಿ ಡಿಹೆಚ್​ಓ ಡಾ. ವಿಜಯ್​ ಕುಮಾರ್ ಅವರ ಮನೆ ಕಚೇರಿ ಸೇರಿ ಒಟ್ಟು 6 ಕಡೆ ಏಕಕಾಲಕ್ಕೆ ದಾಳಿ ನಡೆದಿದೆ. ಡಾ.ವಿಜಯ್ ಕುಮಾರ್ ಅವರ ಮನೆ, ಕಚೇರಿ, ಮುಳಬಾಗಿಲಿನಲ್ಲಿರುವ ಮನೆ ಹಾಗೂ ಅವರ ಖಾಸಗಿ ಆಸ್ಪತ್ರೆ ಮೇಲೆ ಎಸಿಬಿ ಅಧಿಕಾರಿಗಳು ರೇಡ್​ ಮಾಡಿದ್ದಾರೆ.Shock - corrupt officer-ACB -attacks - state

ಜೊತೆಗೆ ಚಿಂತಾಮಣಿಯಲ್ಲಿರುವ ಮನೆ ಹಾಗೂ ಬೆಂಗಳೂರಿನ ಫ್ಲಾಟ್ ಮೇಲೆ ಏಕಕಾಲದಲ್ಲಿ ಎಸಿಬಿ ಡಿವೈಎಸ್​ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇನ್ನು ವಿಮ್ಸ್ ಮಾಜಿ ನಿರ್ದೇಶಕ ಶ್ರೀನಿವಾಸ್ ಮನೆ ಕಚೇರಿಗಳ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ.

ENGLISH SUMMARY…

Early morning ACB raids shock corrupt officials
Bengaluru/ Kolar, Feb. 2,2021 (www.justkannada.in): Officials attached to the Anti-Corruption Bureau (ACB) today raided residences and offices of several government officials on charges of accumulating illegal assets.
Raids were held at 30 places across the State including, Bengaluru City, Kolar, Hubballi, and other places.
A raid was conducted on the residence of Hubballi Irrigation Department, Executive Engineer Devraj Shiggaon. Three teams raided his residences located in Gokul road and Kotilingeshwara nagara in Hubballi. The inspection is still going on.Shock - corrupt officer-ACB -attacks - state
Likewise, raids were also held simultaneously on six different places including the residence of Kolar DHO Dr. Vijaykumar, including his residence in Mulabagilu and his private hospital. ACB team led by DySP Purushottam conducted the raid on his residence in Chintamani and an apartment in Bengaluru. Raids were also held in the residence and office of VIMS former Director Srinivas.
Keywords: ACB raids on corrupt officials/ early morning raids/ Bengaluru/ Kolar/ Hubballi

Key words: Shock – corrupt officer-ACB -attacks – state