ಬರ್ತ್ ಡೇ ವಿಶ್ ಮಾಡಲು ಮನೆ ಹತ್ರ ಬರ್ಬೇಡಿ: ಅಭಿಮಾನಿಗಳಿಗೆ ಶಿವರಾಜ್’ಕುಮಾರ್ ಮನವಿ

Promotion

ಬೆಂಗಳೂರು, ಜುಲೈ 04, 2020 (www.justkannada.in): ಹುಟ್ಟಿದ ಹಬ್ಬದ ದಿನ ನಮ್ಮ ಮನೆ ಹತ್ರ ಯಾರೂ ಬರಬೇಡಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಜುಲೈ 12 ರಂದು ಶಿವರಾಜಕುಮಾರ್ ಬರ್ತ್ ಡೇ. ಆ ದಿನ ಪ್ರತೀ ವರ್ಷವೂ ಅವರ ಮನೆ ಮುಂದೆ ಅಭಿಮಾನಿಗಳು ಜಮಾಯಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಯಾರೂ ಬರದಂತೆ ಶಿವಣ್ಣ ಕೋರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶದ ಮೂಲಕ ಶಿವಣ್ಣ ಈ ಮನವಿ ಮಾಡಿದ್ದಾರೆ.
ನಮಗೆಲ್ಲರಿಗೂ ನಮ್ಮೆಲ್ಲರ ಸುರಕ್ಷತೆ ಮುಖ್ಯ. ಹೀಗಾಗಿ ಗುಂಪು ಸೇರಿ ಆರೋಗ್ಯಕ್ಕೆ ಕುತ್ತು ತರುವುದು ಬೇಡ. ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸೋಣ ಎಂದಿದ್ದಾರೆ.